", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/34454720250118072247filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "9739875729" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಿರಿಯೂರು: ನಗರದ ನಾಗರೀಕರು ಸ್ವಯಂ ಪ್ರೇರಣ ಬಂದ್ ಪ್ರಯುಕ್ತ ನಗರದ ಪ್ರಮುಖ ಬೀದಿಯಲ್ಲಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು. ಅಧ್ಯ...Read more" } ", "keywords": "Node,Chitradurga,News", "url": "https://publicnext.com/node" } ಹಿರಿಯೂರು: 'ರೈತನ ಬದುಕು ತುಂಬಾ ದುಃಸ್ತರ ಸ್ಥಿತಿಗೆ ತಲುಪಿದೆ'
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯೂರು: 'ರೈತನ ಬದುಕು ತುಂಬಾ ದುಃಸ್ತರ ಸ್ಥಿತಿಗೆ ತಲುಪಿದೆ'

ಹಿರಿಯೂರು: ನಗರದ ನಾಗರೀಕರು ಸ್ವಯಂ ಪ್ರೇರಣ ಬಂದ್ ಪ್ರಯುಕ್ತ ನಗರದ ಪ್ರಮುಖ ಬೀದಿಯಲ್ಲಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.

ಅಧ್ಯಕ್ಷರಾದ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ, ಆತ್ಮೀಯ ವರ್ತಕ ಬಂಧುಗಳೇ ಹಿರಿಯೂರು ತಾಲೂಕಿನಲ್ಲಿ ವಾಣಿವಿಲಾಸ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಹಿರಿಯೂರು ತಾಲೂಕಿನ ಬಹುತೇಕ ಮಣ್ಣಿನ ಕೆರೆಗಳು ಖಾಲಿಯಾಗಿವೆ. ಜವನಗೊಂಡನಹಳ್ಳಿ ಹೋಬಳಿಯಲ್ಲಿ ಆ ಭಾಗದ ಗಾಯತ್ರಿ ಜಲಾಶಯ ಹಾಗೂ 16 ಕೆರೆಗಳಿಗೆ ನೀರು ತುಂಬಿಸಬೇಕು ಎಂದು 212 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ.

ಕಸಬಾ ಹಾಗೂ ಐಮಂಗಳ ಹೋಬಳಿಯ 6 ಕೆರೆಗಳಿಗೂ ನೀರು ತುಂಬಿಸಬೇಕು ಎಂದು ನಿರಂತರವಾಗಿ ನಾನಾ ರೀತಿಯ ಹೋರಾಟಗಳನ್ನು ರೈತರು ಮಾಡುತ್ತಾ ಬಂದಿದ್ದಾರೆ ಆ ಭಾಗದಲ್ಲಿ ಅಂತರ್ಜಲ ಸಂಪೂರ್ಣ ಕುಸಿದು ಸಾವಿರಾರು ಅಡಿ ಬೋರ್ವೆಲ್ ಕೊರೆದರು ನೀರು ಬರುತ್ತಿಲ್ಲ ಬೋರ್ವೆಲ್ ಕೊರಸಿ ಕೊರಸಿ ರೈತ ತುಂಬಾ ಸಾಲಗಾರನಾಗಿದ್ದಾನೆ.

ರೈತನ ಬದುಕು ತುಂಬಾ ದುಃಸ್ತರ ಸ್ಥಿತಿಗೆ ತಲುಪಿದೆ ರೈತಾಪಿ ವರ್ಗ ತುಂಬಾ ಕಷ್ಟಕರ ಜೀವನ ನಡೆಸುತ್ತಿದ್ದಾರೆ ಗ್ರಾಮೀಣ ಭಾಗದ ರೈತರ ಮಕ್ಕಳು ಬಹುತೇಕ ನಗರಗಳನ್ನು ಸೇರಿಕೊಂಡು ಅವರ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದ್ದರಿಂದ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರುವ ಹಿನ್ನೆಲೆಯಲ್ಲಿ ದಿನಾಂಕ 20-1-2025ನೇ ಸೋಮವಾರ ಹಿರಿಯೂರ್ ನಗರವನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಹಿರಿಯೂರು ತಾಲೂಕು ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

18/01/2025 07:30 pm

Cinque Terre

420

Cinque Terre

0

ಸಂಬಂಧಿತ ಸುದ್ದಿ