", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/34454720250116115932filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "9739875729" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸದುರ್ಗ :ಪಟ್ಟಣದ 2ನೇ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಬೆಣ್ಣೆ ವ್ಯಾಪಾರ ನಡೆಯುತ್ತದೆ. 300ಕ್ಕೂ ಅಧಿಕ ಜನರು ವಹಿವ...Read more" } ", "keywords": "Node,Chitradurga,News", "url": "https://publicnext.com/node" }
ಹೊಸದುರ್ಗ :ಪಟ್ಟಣದ 2ನೇ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೆ ಬೆಣ್ಣೆ ವ್ಯಾಪಾರ ನಡೆಯುತ್ತದೆ. 300ಕ್ಕೂ ಅಧಿಕ ಜನರು ವಹಿವಾಟಿನಲ್ಲಿ ತೊಡಗುತ್ತಾರೆ. ಹಬ್ಬ ಹರಿದಿನಗಳಲ್ಲಂತೂ ಖರೀದಿ ತುಸು ಜೋರಾಗಿಯೇ ನಡೆಯುತ್ತದೆ. ಆದರೆ, ಇದಕ್ಕಾಗಿ ಪ್ರತ್ಯೇಕ ಸ್ಥಳವಿಲ್ಲ.ರಸ್ತೆಗಳ ಬದಿ ಕಿರಿದಾದ ಸ್ಥಳದಲ್ಲೇ ಬೆಣ್ಣೆ ವ್ಯಾಪಾರ ನಡೆಯುತ್ತದೆ.2ನೇ ಮುಖ್ಯ ರಸ್ತೆಯ ಬಂಡೆ ಸಂತೆಗೆ ಹೋಗುವ ಕಡೆ ಬೆಣ್ಣೆ ವ್ಯಾಪಾರ ನಡೆಯುತ್ತಿದ್ದು, ವಾಹನ ದಟ್ಟಣೆ ಹೆಚ್ಚಿರುತ್ತದೆ. ನಿಲುಗಡೆಗೂ ಸ್ಥಳಾವಕಾಶವಿಲ್ಲ. ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರೆಗೂ ಬೆಣ್ಣೆ ವ್ಯಾಪಾರ ಮಾಡುವವರು ಕೈಯಲ್ಲಿ ಬೆಣ್ಣೆ ಹಿಡಿದು, ರಸ್ತೆ ಬದಿಯಲ್ಲಿ ನಿಂತಿರುತ್ತಾರೆ.
ಇಲ್ಲಿ ಶೌಚಾಲಯ, ಕುಡಿಯುವ ನೀರು, ನೆರಳಿನ ಸೌಲಭ್ಯ ಇಲ್ಲ. ಮಳೆ ಬಂದಾಗಲಂತೂ ವ್ಯಾಪಾರ ನಡೆಯುವುದು ವಿರಳಾತೀವಿರಳ. ಕೆಲವು ಅಂಗಡಿ ಮಾಲೀಕರು ಮಳೆ ಬಂದಾಗ ಆಶ್ರಯ ನೀಡುತ್ತಾರೆ. ಆದರೆ, ಖರೀದಿದಾರರು ಬರುವುದಿಲ್ಲ. ಹಾಗಾಗಿ ಅತಿಯಾದ ಮಳೆ ಆಗುವಂತಿದ್ದರೆ ಅಂದಿನ ಮಾರುಕಟ್ಟೆಗೆ ಬರುವವರ ಸಂಖ್ಯೆ ಕಡಿಮೆ ಇರುತ್ತದೆ.
Kshetra Samachara
16/01/2025 12:02 pm