", "articleSection": "News,Public News,Others", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/399529_1737191263_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnandChitradurga" }, "editor": { "@type": "Person", "name": "9742704237" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಿರಿಯೂರು: ನಂದಿಹಳ್ಳಿ ಗ್ರಾಮದಲ್ಲಿ ರಸ್ತೆ ತೆರವು ಮಾಡಿಸಿ ಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಹಿರಿಯೂರು ತಾಲ್ಲ...Read more" } ", "keywords": "Node,Chitradurga,News,Public-News,Others", "url": "https://publicnext.com/node" }
ಹಿರಿಯೂರು: ನಂದಿಹಳ್ಳಿ ಗ್ರಾಮದಲ್ಲಿ ರಸ್ತೆ ತೆರವು ಮಾಡಿಸಿ ಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಹಿರಿಯೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಕೆ ಮಾಡಿದ್ದು ನಂದಿಹಳ್ಳಿ ಗ್ರಾಮದದಿಂದ ನಂದಿಹಳ್ಳಿ ಗೊಲ್ಲರಹಟ್ಟಿಯವರೆಗೆ ಇರುವ ರಸ್ತೆಯಲ್ಲಿನ ಜಂಗಲ್‌ನ್ನು ತೆರವುಗೊಳಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಸುಗಮವಾಗಿ ಸಂಚಾರ ಮಾಡಲು ಮತ್ತು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ.
ಹಲವು ವರ್ಷಗಳಿಂದ ನಂದಿಹಳ್ಳಿ ಹಾಗೂ ನಂದಿಹಳ್ಳಿ ಗೊಲ್ಲರಹಟ್ಟಿಯ ಗ್ರಾಮಸ್ಥರು ಪುರಾತನ ಕಾಲದಿಂದಲೂ ರಸ್ತೆಯಿದ್ದು ಈ ರಸ್ತೆಯಲ್ಲಿ ವಾಹನಗಳು, ದನಕರುಗಳು, ಶಾಲಾಮಕ್ಕಳು, ಪ್ರತಿದಿನ ಓಡಾಟ ನಡೆಸುತ್ತಿದ್ದು ಗ್ರಾಮದ ಕೆಲವರು ದೂರುದ್ದೇಶಪೂರ್ವಕವಾಗಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ ರಸ್ತೆಯನ್ನು ಡಾಂಬರೀಕರಣ ಮಾಡದಂತೆ ತಾತ್ಕಾಲಿಕ ನಿರ್ಬಂಧವನ್ನ ಪಡೆದು ಅಡ್ಡಿಪಡಿಸಿದ್ದಾರೆ.
ಗ್ರಾಮಸ್ಥರಿಗೆ ಸಂಚಾರ ಮಾಡಲು ಮತ್ತು ರಂಗನಾಥ ಸ್ವಾಮಿ ದೇವರ ಉತ್ಸವ ಮೂರ್ತಿ ಜಾತ್ರಾ ಸಮಯದಲ್ಲಿ ಮೆರವಣಿಗಯ ಮೂಲಕ ಕರೆದುಕೊಂಡು ಹೋಗಲು ಮತ್ತು ಶಾಲಾಮಕ್ಕಳು ರಸ್ತೆಯಲ್ಲಿ ನಡೆದಾಡಲು ಜಂಗಲ್‌ನ್ನು ತೆರವುಗೊಳಸಿ ರಸ್ತೆ ಅಭಿವೃದ್ಧಿ ಪಡಿಸಿಕೊಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಕೆ ಮಾಡಿದ್ದಾರೆ.
Kshetra Samachara
18/01/2025 02:37 pm