ಮೊಳಕಾಲ್ಮುರು: ಪಟ್ಟಣದಲ್ಲಿ ನಡೆದ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಮೂರು ಕೇಂದ್ರಗಳಿಂದ ಒಟ್ಟು 56 ವಿದ್ಯಾರ್ಥಿಗಳು ಗೈರಾಗಿ,584 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆ, ಆದರ್ಶ ವಸತಿ ಶಾಲೆಯಲ್ಲಿ ತಲಾ 120 ವಿದ್ಯಾರ್ಥಿಗಳು ಹಾಗೂ ದುರ್ಗಾ ಪ್ರೌಢಶಾಲೆಯಲ್ಲಿ 16 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗಿದ್ದು ಇದರಲ್ಲಿ ಕ್ರಮವಾಗಿ 20, 19 ಹಾಗೂ ದುರ್ಗಾ ಪ್ರೌಢಶಾಲೆಯಲ್ಲಿ 17 ಜನ ಗೈರಾಗಿದ್ದರು.
ಮೂರು ಕೇಂದ್ರಗಳಲ್ಲಿ ಪರೀಕ್ಷಾ ಮುಖ್ಯ ಅಧೀಕ್ಷಕರಾಗಿ ಎಂ.ಮಲ್ಲಿಕಾರ್ಜುನ್, ಎ.ರಾಜಣ್ಣ ಹಾಗೂ ಎಂ.ಹನುಮಂತಪ್ಪ ಕರ್ತವ್ಯ ನಿರ್ವಹಿಸಿದರು.
Kshetra Samachara
18/01/2025 04:28 pm