", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/40274420250119042403filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Kaveri Hosadurg" }, "editor": { "@type": "Person", "name": "6362053469" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸದುರ್ಗ : ಜಿಲ್ಲೆಯ ಯುವ ಪ್ರತಿಭೆ ರಘುರಾಮ್ ನಾಯಕರಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಮಾಯಾವಿ ಚಿತ್ರಕ್ಕೆ ಮುಹೂರ್ತ ನಡೆಯಿತು. ನಗರದ...Read more" } ", "keywords": "Node,Chitradurga,Politics,Public-News,News", "url": "https://publicnext.com/node" }
ಹೊಸದುರ್ಗ : ಜಿಲ್ಲೆಯ ಯುವ ಪ್ರತಿಭೆ ರಘುರಾಮ್ ನಾಯಕರಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಮಾಯಾವಿ ಚಿತ್ರಕ್ಕೆ ಮುಹೂರ್ತ ನಡೆಯಿತು.
ನಗರದ ಬೆಟ್ಟದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಚಿತ್ರತಂಡವು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಾಗೂ ಕುಂಚಿಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಈ ವೇಳೆ ಶ್ರೀ ಶಾಂತವೀರ ಸ್ವಾಮೀಜಿ ಚಿತ್ರ ತಂಡಕ್ಕೆ ಶುಭಾಶಯ ಕೋರಿ ಮಾತನಾಡಿ, ಹೊಸ ಪ್ರಯತ್ನ, ಹೊಸ ಕಲಾವಿದರು, ಹೊಸ ಚಿಂತನೆಗಳೊಂದಿಗೆ ಹೊಸತನ್ನು ಮಾಡುವ ಹಂಬಲದೊಂದಿಗೆ ಈ ತಂಡ ತನ್ನ ಅನುಭವಗಳನ್ನು ಸಿನಿಮಾ ಮೂಲಕ ಹೇಳುವುದಕ್ಕಾಗಿ ಬಂದಿದೆ.
ವಿಶೇಷವಾಗಿ ಮಠದ ಭಕ್ತರು, ಜಿಲ್ಲೆಯವರೇ ಆದ ಯುವ ಪ್ರತಿಭೆ ರಘುರಾಮ್ ಅವರು ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವುದು ತುಂಬಾ ಸಂತಸ ತಂದಿದೆ..
ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳ ಜತೆಗೆ ನವೀರಾದ ಪ್ರೇಮ ಕಥಾ ಹಂದರದ ಈ ಚಿತ್ರಕ್ಕೆ ಒಟ್ಟು 50 ದಿನಗಳ ಕಾಲ ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಹೊಸ ಪ್ರಯತ್ನದಲ್ಲಿ ಹೊಸ ಆಲೋಚನೆಗಳ ಮೂಲಕ ಹೊಸದಾದ ಒಂದು ಒಳ್ಳೆಯ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸುವ ಮೂಲಕ ನಮ್ಮನ್ನು ನಾವು ಭಿನ್ನವಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿದ್ದೇವೆ.”
Kshetra Samachara
19/01/2025 04:24 pm