ಹುಬ್ಬಳ್ಳಿ: ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ಪುಟ್ಟ ಗ್ರಾಮ ಈಗ ಪಾವನ ಕ್ಷೇತ್ರವಾಗಿದೆ. ಸೌರಮಂಡಲವನ್ನು ಪ್ರತಿನಿಧಿಸುವ ನವಗ್ರಹಗಳ ಮಾದರಿಯಲ್ಲಿ ವರೂರಿನಲ್ಲಿ ನಿರ್ಮಾಣವಾಗಿವೆ ಲೋಕ ಕಲ್ಯಾಣದ ನವಗ್ರಹಗಳು.
ಒಂಬತ್ತು ಗ್ರಹಗಳ ಮಾದರಿಯಲ್ಲಿ ಪಾರ್ಶ್ವನಾಥರ ವಿಗ್ರಹಗಳನ್ನು ನಿರ್ಮಾಣ ಮಾಡಿದ್ದು, ಈಗ ವಿಶ್ವದಲ್ಲಿಯೇ ಮೊಟ್ಟಮೊದಲ ಪಾರ್ಶ್ವನಾಥರ ನವಗ್ರಹ ತೀರ್ಥ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಈಗಾಗಲೇ ಸಕಲ ಸಿದ್ಧತೆ ಮಾಡಲಾಗಿದ್ದು, ಒಂಬತ್ತು ಗ್ರಹಗಳನ್ನು ಪ್ರತಿನಿಧಿಸುವ ಪಾರ್ಶ್ವನಾಥರ ವಿಗ್ರಹಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವುದು ನಿಜಕ್ಕೂ ವಿಶೇಷವಾಗಿದೆ.
ಪುಟ್ಟ ಗ್ರಾಮವನ್ನು ಪಾವನ ಕ್ಷೇತ್ರ ಮಾಡುವಲ್ಲಿ ರಾಷ್ಟ್ರಸಂತ ಗುಣಧರನಂದಿ ಮಹಾರಾಜರ ಬಹುದೊಡ್ಡ ಶ್ರಮವಿದೆ. ಗ್ರಾಮವನ್ನು ಗ್ಲೋಬಲ್ ಲೆವೆಲ್ ನಲ್ಲಿ ಗುರುತಿಸುವಂತೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ. ಭವ್ಯ ಪಾವನ ಕ್ಷೇತ್ರವಾಗಿ ವರೂರು ನಿರ್ಮಾಣವಾಗಿರುವುದು ಉತ್ತರ ಕರ್ನಾಟಕದ ಹೆಮ್ಮೆಯ ಸಂಗತಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2025 02:48 pm