", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/229640-1737296179-hbl0.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Ishtalinga" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ದೇಶ ಕಾಯುವ 31 ವೀರ ಯೋಧರ ಕುಟುಂಬಗಳಿಗೆ ಮಜೇಥಿಯಾ ಪೌಂಡೇಶನ್ ಕೈಗೊಂಡ ಅದ್ಧೂರಿ ವೀರ ನಮನ ಕಾರ್ಯಕ್ರಮದ ಮೆರವಣಿಗೆ ಅಶೋಕನಗರದ ಮಾರುತಿ...Read more" } ", "keywords": "Hubballi, Veer Namana Program, Majethia Foundation, Tribute to Warriors, Patriotic Event, Hubballi Events, Karnataka News, Cultural Procession, National Pride, Social Awareness Program.,Hubballi-Dharwad,Cultural-Activity", "url": "https://publicnext.com/node" }
ಹುಬ್ಬಳ್ಳಿ: ದೇಶ ಕಾಯುವ 31 ವೀರ ಯೋಧರ ಕುಟುಂಬಗಳಿಗೆ ಮಜೇಥಿಯಾ ಪೌಂಡೇಶನ್ ಕೈಗೊಂಡ ಅದ್ಧೂರಿ ವೀರ ನಮನ ಕಾರ್ಯಕ್ರಮದ ಮೆರವಣಿಗೆ ಅಶೋಕನಗರದ ಮಾರುತಿ ಮಂದಿರದಿಂದ ಆರಂಭಗೊಂಡು ಗುಜರಾತ್ ಭವನದವರೆಗೆ ಜನಸಾಗರದೊಂದಿಗೆ ಯಶಸ್ವಿಯಾಗಿ ತಲುಪಿತು.
ಅನ್ನ ನೀಡುವ ರೈತ ದೇಶ ಕಾಯುವ ಯೋಧ ಯಾವತ್ತೂ ಶ್ರೇಷ್ಠ ಎನ್ನುವ ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ದಂಪತಿಗಳು ಮಾರುತಿ ದೇವರ ದರ್ಶನ ಪಡೆದು, ಭಾರತಮಾತೆ ಭಾವಚಿತ್ರ ಮೆರವಣಿಗೆಗೆ ವಾಹನಕ್ಕೆ ತ್ರಿವರ್ಣ ಬಣ್ಣದ ಬಲೂನ್ ಹಾರಿ ಬಿಟ್ಟು ಚಾಲನೆ ನೀಡಿದರು.
200 ಕ್ಕೂ ಹೆಚ್ಚು ಎನ್.ಸಿ.ಸಿ ವಿದ್ಯಾರ್ಥಿಗಳ ಪರೇಡ್, ವಾದ್ಯ ಮೇಳಗಳ ವಿನಾದದಲ್ಲಿ ಹೊರಟ ಮೆರವಣಿಗೆ ಉದ್ದಕ್ಕೂ 31 ಯೋಧರ ಕುಟುಂಬಗಳ ಜೊತೆ ಹೆಜ್ಜೆ ಹಾಕಿದ ಮಜೇಥಿಯಾ ಪೌಂಡೇಶನ್ ಕುಟುಂಬಸ್ಥರು, ಮಜೇಥಿಯಾ ಪೌಂಡೇಶನ್ ಆಡಳಿತ ಮಂಡಳಿ ಯೋಧರ ಕುಟುಂಬಗಳಿಗೆ ನೀಡುವ ಗೌರವ ಎದ್ದು ತೋರಿತು.
ಅಶೋಕನಗರದ ಮಾರುತಿ ಮಂದಿರದಿಂದ ಹೊರಟ ಮೆರವಣಿಗೆಗೆ ಭಾರತಮಾತೆ ವೇಷ ಧರಿಸಿದ ಮಹಿಳೆ ಮತ್ತು ಕುಂಭ-ಕೊಡಗಳನ್ನು ಹೊತ್ತ ಮಹಿಳೆಯರು ದೇಶ ಭಕ್ತಿ ಗೀತೆಗಳಿಗೆ ಮಾಡಿದ ನೃತ್ಯ ಕಣ್ಮನ ಸೆಳೆದವು.
ಎನ್.ಸಿ.ಸಿ ವಿದ್ಯಾರ್ಥಿಗಳ ಪರೇಡ್, ಶಿಸ್ತು, ಸಂಯಮ, ಮೆರವಣಿಗೆ ಕೇಂದ್ರ ಬಿಂದುವಾಯಿತು.
Kshetra Samachara
19/01/2025 07:27 pm