", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/229640-1737295626-sarva.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಅದು ಪಾರ್ಶ್ವನಾಥ ತೀರ್ಥಂಕರರಿಗೆ ಬಹುದೊಡ್ಡ ಭಕ್ತಿ ಸಮರ್ಪಣೆ ಮಾಡುವ ಉತ್ಸವ. ಇಂತಹದೊಂದು ಉತ್ಸವ ಈಗ ಮಹೋತ್ಸವವಾಗಿ ಲೋಕ ಕಲ್ಯಾಣದ ಸಂ...Read more" } ", "keywords": "Hubballi, Diksha Kalyana Program, Mass Marriage Ceremony, Karnataka Government Scheme, Hubballi Events, Wedding Ceremony, Marriage Celebration, Social Welfare Program, Karnataka News.,Hubballi-Dharwad,Cultural-Activity,Religion", "url": "https://publicnext.com/node" }
ಹುಬ್ಬಳ್ಳಿ: ಅದು ಪಾರ್ಶ್ವನಾಥ ತೀರ್ಥಂಕರರಿಗೆ ಬಹುದೊಡ್ಡ ಭಕ್ತಿ ಸಮರ್ಪಣೆ ಮಾಡುವ ಉತ್ಸವ. ಇಂತಹದೊಂದು ಉತ್ಸವ ಈಗ ಮಹೋತ್ಸವವಾಗಿ ಲೋಕ ಕಲ್ಯಾಣದ ಸಂಕಲ್ಪದ ಜೊತೆಗೆ ಐದನೇ ದಿನಕ್ಕೆ ಕಾಲಿಟ್ಟಿದೆ. ಲಕ್ಷಾಂತರ ಭಕ್ತ ಸಮೂಹದಲ್ಲಿ ಅದ್ದೂರಿಯಾಗಿ ನಡೆದಿದ್ದು, ಜೈ ಜಿನೇಂದ್ರ ಘೋಷಣೆಗಳೊಂದಿಗೆ ಪಂಚಕಲ್ಯಾಣ ಮಹೋತ್ಸವ ಪಂಚ ದಿನವಾದ ಇಂದು ಅದ್ಧೂರಿಯಾಗಿ ಯಶಸ್ವಿಗೊಂಡಿದೆ.
ಎಲ್ಲೆಡೆಯೂ ಭಕ್ತಿಯ ಘೋಷಣೆಗಳು, ಮನಸ್ಸಿಗೆ ಮುದ ನೀಡುವ ಸಂಗೀತ ವಾದ್ಯಗಳ ಜೊತೆಗೆ ಸ್ವರ್ಗವೇ ಧರೆಗಿಳಿದ ರೀತಿಯಲ್ಲಿ ಪಾರ್ಶ್ವನಾಥ ತೀರ್ಥಂಕರರ ದೀಕ್ಷಾ ಕಲ್ಯಾಣ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಕಾರ್ಯಕ್ರಮ ಐದನೇ ದಿನವೂ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಕಾರ್ಯಕ್ರಮದ ಯಶಸ್ವಿಗೆ ಭಕ್ತಸಾಗರವೇ ಸಾಕ್ಷಿಯಾಗಿದೆ. ಪಂಚಕಲ್ಯಾಣ, ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಐದನೇ ದಿನಕ್ಕೆ ಕಾಲಿಟ್ಟಿದ್ದು, ಐದನೇ ದಿನ ದೀಕ್ಷಾ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಚಿವ ಡಿ.ಸುಧಾಕರ ವಿದ್ಯುಕ್ತವಾಗಿ ಚಾಲನೆ ನೀಡಿದರು. ರಾಷ್ಟ್ರಸಂತ ಗುಣಧರನಂದಿ ಮಹಾರಾಜರು ಹಾಗೂ ಕುಂತುಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಕಾರ್ಯಕ್ರಮ ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಪಾರ್ಶ್ವನಾಥರಿಗೆ ರಾಜಾಭಿಷೇಕ ಕಾರ್ಯಕ್ರಮದ ಬೆನ್ನಲ್ಲೇ ದೀಕ್ಷಾ ಕಲ್ಯಾಣ ಕಾರ್ಯಕ್ರಮದ ಮೂಲಕ ಪಾರ್ಶ್ವನಾಥರಿಗೆ ದೀಕ್ಷೆ ನೀಡುವ ಪೂಜೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಇನ್ನೂ ಭವ್ಯ ರಾಜ ವೈಭವದಲ್ಲಿಯೇ ಪಾರ್ಶ್ವನಾಥ ತೀರ್ಥಂಕರರಿಗೆ ದೀಕ್ಷಾ ಕಲ್ಯಾಣ ಪೂಜೆ ಅದ್ದೂರಿಯಾಗಿ ನಡೆದಿದ್ದು, ಜೈನ ಧರ್ಮದ ಐತಿಹಾಸಿಕ ಪರಂಪರೆಯಲ್ಲಿ ಶಾಸ್ತ್ರೋಕ್ತವಾಗಿ ದೀಕ್ಷಾ ಕಲ್ಯಾಣ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ದೀಕ್ಷಾ ಕಲ್ಯಾಣ ಕಾರ್ಯಕ್ರಮದಲ್ಲಿಯೇ ಇಬ್ಬರೂ ಜೈನ ಧರ್ಮದ ಸನ್ಯಾಸತ್ವವನ್ನು ಸ್ವೀಕಾರ ಮಾಡಿಕೊಂಡು ದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ಆಚಾರ್ಯರ ಹಾಗೂ ಇಂದ್ರ ಇಂದ್ರಾಣಿ ಹಾಗೂ ಭಟ್ಟಾಚಾರ್ಯರ ನೇತೃತ್ವದಲ್ಲಿ ವಿಶೇಷ ಪೂಜೆಯ ಮೂಲಕ ಇಬ್ಬರಿಗೆ ಮುನಿ ದೀಕ್ಷಾ ನೀಡಲಾಯಿತು. ಲಕ್ಷಾಂತರ ಭಕ್ತರು ಇಂತಹದೊಂದು ಅವಿಸ್ಮರಣೀಯ ಕ್ಷಣದಲ್ಲಿ ಭಾಗವಹಿಸಿದ್ದು, ವಿಶೇಷವಾಗಿದೆ. ಎರಡನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಎರಡು ದೀಕ್ಷಾ ಕಲ್ಯಾಣ ಮಾಡುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು.
ಒಟ್ಟಿನಲ್ಲಿ ಬಹು ನೀರಿಕ್ಷಿತ ಮಹಾಮಸ್ತಕಾಭಿಷೇಕದ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಐದು ದಿನವೂ ಗಣ್ಯಾತಿ ಗಣ್ಯರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಪಾರ್ಶ್ವನಾಥರಿಗೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಜೊತೆಗೆ ಲೋಕ ಶಾಂತಿ ಸಂಕಲ್ಪ ನಿರ್ವಿಘ್ನವಾಗಿ ನಡೆಯಲಿ ಎಂಬುವುದೇ ನಮ್ಮ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2025 06:41 pm