ಮಂಡ್ಯ: ಸ್ಕೂಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಸೆಮಣೆ ಏರಬೇಕಿದ್ದ ನವ ವಧುವೊಬ್ಬಳು ಮಸಣ ಸೇರಿದ ದಾರುಣ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಚ್ ಬಸಾಪುರ ಗೇಟ್ ಬಳಿ ಜರುಗಿದೆ.
ಬಾಳೆಹೊನ್ನಿಗ ಗ್ರಾಮದ ವಾಸಿ ಕೃಷ್ಣೇಗೌಡ ಎಂಬುವರ ಮಗಳಾದ 26 ವರ್ಷದ ಶರಣ್ಯ ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದು ಈಕೆ ಕನಕಪುರ ತಾಲ್ಲೂಕು ಕಾಡನಹಳ್ಳಿ ಗ್ರಾ ಪಂ ಯಲ್ಲಿ ನರೇಗಾ ಯೋಜನೆಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು 20 ದಿನಗಳಲ್ಲಿ ಈಕೆಗೆ ಮದುವೆ ನಿಶ್ಚಯವಾಗಿದ್ದು ಎಂಗೇಜ್ ಮೆಂಟ್ ಸಹ ಆಗಿತ್ತು. ಶನಿವಾರ ಬೆಳಿಗ್ಗೆ 10:30ರ ಸಮಯದಲ್ಲಿ ಕಾರ್ಯನಿಮಿತ್ತ ಬಾಳೆಹೊನ್ನಿಗ ಗ್ರಾಮದಿಂದ ಹಲಗೂರು ಕಡೆಗೆ ತಮ್ಮ ಹೊಂಡಾ ಡಿಯೋದಲ್ಲಿ ಬರುತ್ತಿದ್ದ ಇವರಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ತಲೆಗೆ ತೀವ್ರ ಪೆಟ್ಟು ಬಿದ್ದು ಶರಣ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಹಲಗೂರು ಪೊಲೀಸರು ಪ್ರಕರಣ. ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
18/01/2025 02:22 pm