ಮಂಡ್ಯ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ತೆರಳಿದ್ದ ಮಂಡ್ಯ ಮೂಲದ ಅರ್ಚಕರೊಬ್ಬರು ಭಾನುವಾರ ಮಧ್ಯಾಹ್ನ ಜರುಗಿದ್ದ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ನಿನ್ನೆ (ಮಂಗಳವಾರ) ಪಬ್ಲಿಕ್ ನೆಕ್ಸ್ಟ್ ನಲ್ಲಿ ವರದಿಯಾಗಿತ್ತು. ಇದೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರುಣ್ ಶಾಸ್ತ್ರಿ ಸಹ ಇಂದು ಮೃತಪಟ್ಟಿದ್ದಾರೆ.
ಕುಂಭಮೇಳದ ಪವಿತ್ರ ಸ್ನಾನದ ನಂತರ ಕಾಶಿಗೆ ತಮ್ಮ ಮಾರುತಿ ವ್ಯಾಗನಾರ್ KA 09 MF 2942 ಕಾರಿನಲ್ಲಿ ತೆರಳುವಾಗ ಮಿರ್ಜಾಪುರ ಹತ್ತಿರ ಬಿರೋಹಿ ಗ್ರಾಮದ ಹತ್ತಿರ ಎದುರಿನಿಂದ ಬಂದ ಭಾತರ್ ಗ್ಯಾಸ್ ಟ್ಯಾಂಕರ್ UP 63 T7473 ಡಿಕ್ಕಿ ಹೊಡೆದಿತ್ತು. ಪರಿಣಾಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗ್ಗೆ 8:32ಕ್ಕೆ ರಾಮಕೃಷ್ಣಶರ್ಮ ಕೊನೆಯುಸಿರೆಳೆದಿದ್ದರು. ಜೊತೆಗಿದ್ದು ಕಾರ್ ಚಾಲನೆ ಮಾಡುತ್ತಿದ್ದ ಮಂಡ್ಯದ ಅರುಣ್ ಶಾಸ್ತ್ರಿ ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ವರದಿ: ಅರುಣ್ ಪ್ರಸಾದ್, ಪಬ್ಲಿಕ್ ನೆಕ್ಸ್ಟ್, ಮಂಡ್ಯ
PublicNext
29/01/2025 06:33 pm