ಮಂಡ್ಯ : ಕುಂಭಮೇಳಕ್ಕೆ ತೆರಳಿದ್ದ ಮಂಡ್ಯ ಮೂಲದ ಅರ್ಚಕರೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ.
ಮೂಲತಃಬೆಂಗಳೂರಿನವರಾದ ರಾಮಕೃಷ್ಣ ಶರ್ಮ (31) ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು KRS ಹಿನ್ನೀರಿನ ವೇಣುಗೋಪಾಲ ಸ್ವಾಮಿದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವಿವಾಹಿತರಾಗಿದ್ದ ಈತ ತಂದೆ -ತಾಯಿಗೆ ಒಬ್ಬನೇ ಪುತ್ರ. ಪ್ರಯಾಗರಾಜ್ ಕುಂಭಮೇಳದಲ್ಲಿ ಭಾಗವಹಿಸಲು ಕಾರಿನಲ್ಲಿ ತೆರಳಿದ್ದರು. ಕುಂಭಮೇಳದ ಪವಿತ್ರ ಸ್ನಾನದ ನಂತರ ಕಾಶಿಗೆ ತಮ್ಮ ಮಾರುತಿ ವ್ಯಾಗನಾರ್ KA09MF2942 ರಲ್ಲಿ ತೆರಳುವಾಗ ಮಿರ್ಜಾಪುರ ಹತ್ತಿರ ಎದುರಿನಿಂದ ಬಂದ ಗ್ಯಾಸ್ ಟ್ಯಾಂಕರ್ UP63T7473 ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಿಸದೇ ಸೋಮವಾರ ಬೆಳಗ್ಗೆ 8.32ಕ್ಕೆ ಕೊನೆಯುಸಿರೆಳೆದಿದ್ದಾರೆ. ಜೊತೆಗಿದ್ದು ಕಾರ್ ಚಾಲನೆ ಮಾಡುತ್ತಿದ್ದ ಅರುಣ್ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
PublicNext
28/01/2025 05:34 pm