", "articleSection": "Crime,Law and Order,News,Public News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1737187610-V4~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು:ಅವ್ರಿಬ್ರು ಮದುವೆಗೂ ಮುಂಚೆ ಪರಸ್ಪರ ಪ್ರೀತಿ ಮಾಡ್ತಿದ್ರು. ಕುಟುಂಬಸ್ಥರು ಒಪ್ಪದೇ ಇದ್ದಾಗ ಬೇರೆ ಬೇರೆ ವಿವಾಹವಾಗಿದ್ರು. ಕೆಲ ವರ್ಷಗಳ...Read more" } ", "keywords": "Bengaluru, woman found dead, Pakistani national, marriage fix-up, suspicious death, police investigation, Bengaluru crime news, flat murder mystery.,Bangalore,Bangalore-Rural,Crime,Law-and-Order,News,Public-News,LadiesCorner", "url": "https://publicnext.com/node" }
ಬೆಂಗಳೂರು:ಅವ್ರಿಬ್ರು ಮದುವೆಗೂ ಮುಂಚೆ ಪರಸ್ಪರ ಪ್ರೀತಿ ಮಾಡ್ತಿದ್ರು. ಕುಟುಂಬಸ್ಥರು ಒಪ್ಪದೇ ಇದ್ದಾಗ ಬೇರೆ ಬೇರೆ ವಿವಾಹವಾಗಿದ್ರು. ಕೆಲ ವರ್ಷಗಳ ನಂತರ ಆಕೆ ಗಂಡನನ್ನ ಬಿಟ್ರೆ ಈತ ಪತ್ನಿ ಬಿಟ್ಟಿದ್ದ. ಕಟ್ಟಿಕೊಂಡವರನ್ನ ಬಿಟ್ಟು ಮತ್ತೆ ಹಳೇ ಪ್ರೇಮಿಗಳು ಒಂದಾಗಿದ್ರು.
ಮೃತ ಉಜ್ಮಾ ಖಾನ್ (44) ಗಂಡನಿಂದ ವಿಚ್ಛೇದನ ಪಡೆದು ತಾಯಿ ಜೊತೆಗೆ ವಾಸವಿದ್ಳು. ಇನ್ನು ಈತ 53 ವರ್ಷದ ಇಮ್ದಾದ್ ಬಾಷಾ. ಮುಂಬೈನಲ್ಲಿ ಕೆಲಸ ಮಾಡ್ತಿದ್ದ ಈ ಟೆಕ್ಕಿ ಪತ್ನಿ ಜೊತೆಗೆ ಸರಿಹೊಂದದೇ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಕುಂದಲಹಳ್ಳಿ ಸಮೀಪದ ಸ್ಪೈಸ್ ಗಾರ್ಡನ್ ನಲ್ಲಿ ಮನೆ ಮಾಡಿಕೊಂಡು ವಾಸವಿದ್ದ.ಇಮ್ದಾದ್ ಮನೆಗೆ ಉಜ್ಮಾ ಖಾನ್ ಆಗಾಗ ಬಂದು ಹೋಗ್ತಿದ್ಳು. ಆದ್ರೆ ಹೊಸ ವರ್ಷದ ದಿನ ಇಮ್ದಾದ್ ಮನೆಗೆ ಬಂದ ಉಜ್ಮಾ ಶವವಾಗಿದ್ರೆ ಇಮ್ದಾದ್ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ.
ಜನವರಿ 1 ರಂದು ಮಧ್ಯಾಹ್ನ. 12.30ರ ಸುಮಾರಿಗೆ ಸಂಬಂಧಿಕರಿಗೆ ಮೆಸೇಜ್ ಮಾಡಿದ್ದ ಇಮ್ದಾದ್ ಬಾಷ. ನಾನು ಮತ್ತು ಉಜ್ಮಾ ಖಾನ್ ಪ್ರೀತಿ ಮಾಡ್ತಾ ಇದ್ದೀವಿ.ನಮ್ಮ ಎರಡನೇ ಮದುವೆಗೆ ನನ್ನ ಮೊದಲ ಪತ್ನಿ ಅಡ್ಡ ಬರ್ತಿದ್ದಾಳೆ. ಹಾಗಾಗಿ ಇಬ್ಬರು ವಿಷ ತೆಗೆದುಕೊಂಡು ಸಾವನ್ನಪ್ಪುತ್ತಿದ್ದೇವೆ ಎಂದು ಮೆಸೇಜ್ ಮಾಡಿದ್ದ. ಸಂಬಂಧಿಯೊಬ್ಬರು ತಕ್ಷಣ 112 ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.1 ಗಂಟೆ ಅಷ್ಟೊತ್ತಿಗೆ ಸ್ಥಳಕ್ಕೆ ಹೋಗಿದ್ದ ಹೆಚ್ಎಎಲ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಉಜ್ಮಾ ಖಾನ್ ಮೃತ ಪಟ್ಟಿರೋದು ಗೊತ್ತಾದ್ರೆ. ಇಮ್ದಾದ್ ಲೈಜಾಲ್ ಮತ್ತು ಹಾರ್ಪಿಕ್ ಬೆರೆಸಿ ಕುಡಿದು ಅಸ್ವಸ್ಥನಾಗಿದ್ದ.ತಕ್ಷಣ ಆತನನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.
12.30 ಕ್ಕೆ ಈಗ ಸಾಯ್ತೀವಿ ಎಂದು ಇಮ್ದಾದ್ ಹೇಳಿದ್ದ. ಆದ್ರೆ ಮಧ್ಯಾಹ್ನ 2 ಗಂಟೆ ಅಷ್ಟೊತ್ತಿಗೆ ಉಜ್ಮಾ ಖಾನ್ ಮೃತದೇಹ ಪರಿಶೀಲಿಸಿದ ವೈದ್ಯರಿಗೆ ಅದಾಗಲೇ ಉಜ್ಮಾ ಖಾನ್ ಸತ್ತು 10 ರಿಂದ 12 ಗಂಟೆ ಆಗಿದೆ ಅನ್ನೋದು ಗೊತ್ತಾಗಿದೆ. ಅಲ್ಲದೇ ಉಜ್ಮಾ ಮೊಬೈಲ್ ನಲ್ಲಿದ್ದ ಚಾಟ್ ಹಿಸ್ಟರಿ ಕೂಡ ಡಿಲೀಟ್ ಆಗಿತ್ತು.ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಹಾಗಾಗಿ ಉಜ್ಮಾ ಖಾನ್ ಳನ್ನ 31 ರಂದು ರಾತ್ರಿಯೇ ಕೊಂದು ಈತ ಆತ್ಮಹತ್ಯೆ ನಾಟಕ ಆಡ್ತಿದ್ದಾನೆಂಬ ಶಂಕೆ ವ್ಯಕ್ತವಾಗಿದೆ.
ಅಪಾರ್ಟ್ ಮೆಂಟ್ ನಲ್ಲಿ ಪ್ರತ್ಯೇಕ ಫ್ಲ್ಯಾಟ್ ಬಾಡಿಗೆಗೆ ಪಡೆದು ಉಜ್ಮಾ ಖಾನ್ ಳನ್ನ ಅದರಲ್ಲಿ ಇರಿಸಿದ್ದ ಇಮ್ದಾದ್,ಉಜ್ಮಾ ಫ್ಲಾಟ್ ಗೆ ಆಗಾಗ ಹೋಗಿ ಬರ್ತಿದ್ದ. ಅಷ್ಟೇ ಅಲ್ಲಾ ಗಂಡ ಹೆಂಡತಿ ಮಾದರಿಯೇ ಇದ್ದು. ವಿದೇಶಕ್ಕೆ ಟ್ರಿಪ್ ಕೂಡ ಹೋಗಿ ಬಂದಿದ್ರು. ಆಮೇಲೆ ಅದೇನಾಯ್ತೋ ಏನೊ.10 ತಿಂಗಳ ಬಳಿಕ ಮತ್ತೆ ಮುಂಬೈ ಹೋಗೊ ನಿರ್ಧಾರ ಮಾಡಿದ್ದ ಇಮ್ದಾದ್, ಈ ವೇಳೆ ಎರಡೂ ಫ್ಲಾಟ್ ಖಾಲಿ ಮಾಡಿದ್ರಿಂದ. ಉಜ್ಮಾ ಹೆಚ್ ಬಿ ಆರ್ ಲೇಔಟ್ ತಾಯಿ ಮನೆ ಸೇರಿದ್ಳು. ಆದರೂ ಇಬ್ಬರು ದೂರವಾಗಿರ್ಲಿಲ್ಲ. ಪರಸ್ಪರ ಫೋನ್ ಸಂಪರ್ಕದಲ್ಲಿದ್ರು.
ಇದಾದ ಕೆಲ ತಿಂಗಳ ಬಳಿಕ ಇಮ್ದಾದ್ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದು. ಇಲ್ಲೇ ಟೆಕ್ಕಿಯಾಗಿ ಕೆಲಸ ಮುಂದುವರೆಸಿದ್ದ. ಕುಂದಲಹಳ್ಳಿ ಸ್ಪೈಸ್ ಗಾರ್ಡನ್ ನಲ್ಲಿ ಮನೆ ಮಾಡಿದ್ದ ಈತನ ಮನೆಗೆ ಉಜ್ಮಾ ಖಾನ್ ಹೋಗಿ ಬರ್ತಿದ್ಳು. ಈ ಮಧ್ಯೆ 2024 ರಲ್ಲಿ ಉಜ್ಮಾಗೆ ಬೇರೊಂದು ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಆಸ್ಟ್ರೀಯ ದೇಶದಲ್ಲಿರುವ ಪಾಕಿಸ್ತಾನ ಮೂಲದ ವ್ಯಕ್ತಿ ಅರ್ಶದ್ ಎಂಬಾತನ ಸಂಪರ್ಕ ಮಾಡಿದ್ದು. ಮದುವೆ ವಿಚಾರವಾಗಿಯೂ ಮಾತುಕತೆ ನಡೀತಿತ್ತು ಉಜ್ಮಾ ಖಾನ್ ಮೊಬೈಲ್ ಅನ್ನ ಇಮ್ದಾದ್ ಮಾನಿಟರ್ ಗೆ ಕ್ಲೋನ್ ಮಾಡಿಕೊಂಡಿದ್ದ.
ಡಿಸಂಬರ್ 31 ರಂದು ಅಡುಗೆ ಮಾಡಿ ಅದರ ಫೋಟೊವನ್ನ ಉಜ್ಮಾಗೆ ಕಳಿಸಿ ಮನೆಗೆ ಬಾ ಎಂದಿದ್ದ.THAT LOOKS SIZZLING ಎಂದು ಮೆಸೇಜ್ ಮಾಡಿದ್ದ ಉಜ್ಮಾ ರಾತ್ರಿ 9.30 ಕ್ಕೆ ಇಮ್ದಾದ್ ಮನೆ ಹೋಗಿದ್ದಾಳೆ. ಮನೆಯಲ್ಲಿ 31 ರಂದು ರಾತ್ರಿ ಮನೆಯಲ್ಲಿ ಜೋರಾದ ಗಲಾಟೆ ಆಗಿದೆ. ಸೆಕ್ಯೂರಿಟಿ ಬಂದು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಮನೆಯಿಂದ ಬಂದಿರ್ಲಿಲ್ಲ. ಈ ಮಧ್ಯೆ ಜನವರಿ 1 ರಂದು 11 ಗಂಟೆಗೆ ಇಮ್ದಾದ್ ಮನೆಯಿಂದ ಹೊರ ಬಂದಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಉಜ್ಮಾ ಖಾನ್ ಯಾವುದೇ ಚಲನ ವಲನ ಇರಲಿಲ್ಲ. ಅಲ್ಲಿಗೆ 31 ರಂದು ರಾತ್ರಿಯೇ ಕೊಲೆ ಮಾಡಿ ಇಮ್ದಾದ್ ಬಾಷ ನಾಟಕ ಮಾಡಿದ್ದಾನೆ ಅನ್ನೋ ಅನುಮಾನ ದಟ್ಟವಾಗಿದೆ.ಸದ್ಯ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು. ಆರೋಪಿ ಇಮ್ದಾದ್ ನ ಪೊಲೀಸ್ರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
PublicNext
18/01/2025 01:36 pm