", "articleSection": "Politics,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737203548-A16~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ರಾಜ್ಯ ಸರ್ಕಾರ ಮೆಟ್ರೋ ದರ ಏರಿಕೆ ಚಿಂತನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ. ನಾನು ಸಿದ್ದರಾಮಯ್ಯನವರಿಗೆ ಅಣ್ಣಾ ಅಂತ...Read more" } ", "keywords": ",Bangalore,Bangalore-Rural,Politics,Government,News,Public-News", "url": "https://publicnext.com/node" } ಬೆಂಗಳೂರು: "ಅಣ್ಣಾ ಸಿದ್ರಾಮಣ್ಣ, ಏನೇನು ದರ ಏರಿಸಬೇಕು ಒಟ್ಟಿಗೆ ಏರಿಸಿಬಿಡಿ!"- ಮೆಟ್ರೋ ದರ ಏರಿಕೆ ಚಿಂತನೆಗೆ ಅಶೋಕ್ ವ್ಯಂಗ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಅಣ್ಣಾ ಸಿದ್ರಾಮಣ್ಣ, ಏನೇನು ದರ ಏರಿಸಬೇಕು ಒಟ್ಟಿಗೆ ಏರಿಸಿಬಿಡಿ!"- ಮೆಟ್ರೋ ದರ ಏರಿಕೆ ಚಿಂತನೆಗೆ ಅಶೋಕ್ ವ್ಯಂಗ್ಯ

ಬೆಂಗಳೂರು: ರಾಜ್ಯ ಸರ್ಕಾರ ಮೆಟ್ರೋ ದರ ಏರಿಕೆ ಚಿಂತನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ. ನಾನು ಸಿದ್ದರಾಮಯ್ಯನವರಿಗೆ ಅಣ್ಣಾ ಅಂತ ಕರೆಯುತ್ತೇನೆ. ಅದೇನೇನು ಏರಿಸಬೇಕು ಅಂದುಕೊಂಡಿದ್ದೀರಾ, ಅದನ್ನೆಲ್ಲ ಒಟ್ಟಿಗೇ ಏರಿಸಿ ಬಿಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ್ರು. ನೀವು ಪ್ರತಿದಿನ ಇಂಜೆಕ್ಷನ್ ಕೊಟ್ಟು ಕೊಟ್ಟೂ ಗಾಯಗಳಾಗಿವೆ. ಏನ್ ಏನ್ ಕೊಡಬೇಕು... ಒಟ್ಟಿಗೆ ಇಂಜೆಕ್ಷನ್ ಕೊಟ್ಟುಬಿಡಿ ಎಂದು ಟೀಕಿಸಿದ್ರು.

ರಾಜ್ಯದ ಜನರಿಗೆ ಇನ್ನೂ ಎಷ್ಟು ತೆರಿಗೆ ಹಾಕ್ತೀರಾ ಹಾಕಿಬಿಡಿ. ಈ ಬಜೆಟ್ ನಲ್ಲಿ ಹಾಲು, ವಿದ್ಯುತ್, ಪೆಟ್ರೋಲ್ , ಸ್ಟ್ಯಾಂಪ್ ಎಲ್ಲವನ್ನೂ ಏರಿಸುತ್ತೀರಾ! ಆವಾಗವಾಗ ಮಾಡುವ ಬದಲು ಎಲ್ಲಾ ಒಟ್ಟಿಗೆ ಏರಿಸಿಬಿಡಿ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. 5 ಗ್ಯಾರಂಟಿ ಕೊಡ್ತೀವಿ, ತೆರಿಗೆ ಹಾಕೋದಿಲ್ಲ ಎಂದಿದ್ದರು. ಆದ್ರೆ, ಈಗ ಎಲ್ಲದಕ್ಕೂ ತೆರಿಗೆ ಹಾಕ್ತಿದ್ದೀರಾ! ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

Edited By : Suman K
PublicNext

PublicNext

18/01/2025 06:02 pm

Cinque Terre

24.58 K

Cinque Terre

1

ಸಂಬಂಧಿತ ಸುದ್ದಿ