", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/235762-1737127080-WhatsApp-Image-2025-01-16-at-5.52.43-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶಿರಸಿ: ನಗರದ ತಾಲೂಕು ಆಡಳಿತ ಸಭಾಭವನದಲ್ಲಿ ಕರ್ನಾಟಕ ಲೋಕಾಯುಕ್ತ ಕಾರವಾರ ಇವರಿಂದ ಸಾರ್ವಜನಿಕರ ಅಹವಾಲು ಸ್ವೀಕರಿಸಿಸುವ ಕಾರ್ಯಕ್ರವನ್ನು ಗುರ...Read more" } ", "keywords": "Sirsi news, Lokayukta, public grievance, Karnataka news, Shirsi news, Lokayukta complaint, Karnataka Lokayukta, public complaint cell, Sirsi Karnataka, Lokayukta office, complaint redressal ¹ ² ³. ,Uttara-Kannada,Government", "url": "https://publicnext.com/node" } ಶಿರಸಿ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಲೋಕಾಯುಕ್ತರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಲೋಕಾಯುಕ್ತರು

ಶಿರಸಿ: ನಗರದ ತಾಲೂಕು ಆಡಳಿತ ಸಭಾಭವನದಲ್ಲಿ ಕರ್ನಾಟಕ ಲೋಕಾಯುಕ್ತ ಕಾರವಾರ ಇವರಿಂದ ಸಾರ್ವಜನಿಕರ ಅಹವಾಲು ಸ್ವೀಕರಿಸಿಸುವ ಕಾರ್ಯಕ್ರವನ್ನು ಗುರುವಾರ ಲೋಕಾಯುಕ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಒಂದು ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದರಲ್ಲಿ ನಿವೃತ್ತ ಸೈನಿಕರಿಗೆ ಭೂಮಿಯ ಹಂಚಿಕೆಯ ವಿಚಾರ, ಬೆಳಕು ಯೋಜನೆ ಅಡಿ ವಿದ್ಯುತ್ ಕನೆಕ್ಷನ್ ವಿಳಂಬ, ಚರಂಡಿ ಸಮಸ್ಯಗಳು, ಫಾರ್ಮ್ ನಂ.9 ಮತ್ತು 11ಅಡಿಯಲ್ಲಿ ಮನೆಯ ಓನರ್‌ಶಿಪ್ ದಾಖಲಾತಿ ಅನುಮತಿ ವಿಳಂಬ ಇಂತ ಹತ್ತು ಹಲವಾರು ಸಾರ್ವಜನಿಕರ ಅಹವಾಲುಗಳು ಬಂದಿದ್ದು ಗಮನಾರ್ಹವಾಗಿದ್ದವು.

ಸಾರ್ವಜನಿಕರು ನೇರವಾಗಿ ತಮ್ಮ ಕುಂದು ಕೊರತೆಗಳು ಮತ್ತು ಮೂಲಭೂತ ಸೌಲಬ್ಯಗಳಿಂದ ವಂಚಿತರಾದವರು ಲೋಕಾಯುಕ್ತ ಅಧಿಕಾರಿಗಳ ಮುಂದೆ ತಮ್ಮ ಅಹವಾಲನ್ನು ಹೇಳಿದರು. ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದ ಕೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಒಂದು ವಾರದೊಳಗಾಗಿ ಸಮಸ್ಯೆಗಳನ್ನು ನಿವಾರಣೆ ಮಾಡಿ ಕೊಡಿ. ಒಂದು ವೇಳೆ ಅಧಿಕಾರಿಗಳು ಸಮಸ್ಯಗಳನ್ನು ಬಗೆ ಹರಿಸಿ ಕೊಡದೆ ಹೋದರೆ ಸಾರ್ವಜನಿಕರು ಫಾರ್ಮ್ ನಂಬರ್ 1ಮತ್ತು 2 ಭರ್ತಿ ಮಾಡಿ ಕೊಡಿ. ಅದರ ದೂರಿನ ಅನ್ವಯ ನಿಯಮಾವಳಿ ಅನುಸಾರ ಅಧಿಕಾರಿಗಳ ಮೇಲೆ ಕೇಸ್ ರಜಿಸ್ಟರ್ ಮಾಡಲಾಗುವುದು ಎಂದು ಲೋಕಾಯುಕ್ತರು ಸಾರ್ವಜನಿಕರಿಗೆ ಹೇಳಿದರು.

ಅದೇ ರೀತಿ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯಗಳನ್ನು ಬಗೆಹರಿಸಿ ಕೊಡುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು. ಅದೇ ರೀತಿ ಸಾರ್ವಜನಿಕರ ಸಮಸ್ಯಗಳನ್ನು ಆಲಿಸಿದ ಲೋಕಾಯುಕ್ತರು ಕಾನೂನಿನ ಅಡಿಯಲ್ಲಿ ಸಮಸ್ಯಗಳನ್ನು ಯಾವ ರೀತಿ ಬಗೆ ಹರೆಸಿ ಕೊಳ್ಳಬೇಕೆಂದು ಸಾರ್ವಜನಿಕರಿಗೆ ಸಲಹೇ ಗಳನ್ನು ನೀಡಿದರು .

ಈ ಸಂದರ್ಭದಲ್ಲಿಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ , ಲೋಕಾಯುಕ್ತ ಸಿಪಿಐ ವಿನಾಯಕ ಬಿಲ್ಲವ, ತಹಶೀಲ್ದಾರ ಶ್ರೀಧರ ಮುಂದಲಮನಿ, ನಗರ ಸಭೆ ಪೌರಾಯುಕ್ತ ಎಚ್ ಕಾಂತರಾಜು, ಟಿಇಒ ಸತೀಶ ಹೆಗಡೆ, ಹೆಸ್ಕಾಂ ಎಇಇ ನಾಗರಾಜ ಪಾಟೀಲ , ಮಾರ್ಕೆಟ ಪೋಲಿಸ್ ಸ್ಟೇಶನ್ ಪಿಎಸ್‌ಐ ರಾಜಕುಮಾರ್ ಉಕ್ಕಲಿ , ಗ್ರಾಮೀಣ ಪೋಲಿಸ್ ಠಾಣೆ ಪಿಎಸ್ಐ ಪ್ರತಾಪ್ ಮುಂತಾದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

17/01/2025 08:48 pm

Cinque Terre

36.12 K

Cinque Terre

0

ಸಂಬಂಧಿತ ಸುದ್ದಿ