ಬೆಂಗಳೂರು: ಪಿಜಿ ವೈದ್ಯಕೀಯ ಕೋರ್ಸ್ ಪ್ರವೇಶ ಬಯಸಿರುವ ಅರ್ಹರು ದಾಖಲೆ ಪರಿಶೀಲನೆ ಮತ್ತು ಸಲ್ಲಿಕೆಗೆ ಇದ್ದ ದಿನಾಂಕವನ್ನು ಜನವರಿ 21ರವರೆಗೂ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಜನವರಿ 18, 20 ಮತ್ತು 21ರಂದು ದಾಖಲೆ ಪರಿಶೀಲನೆ ಮತ್ತು ಸಲ್ಲಿಕೆಗೆ ಅವಕಾಶ ಇದೆ. ಈ ವಿಷಯದಲ್ಲಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನವರಿ 16ರಂದು ದಾಖಲೆ ಪರಿಶೀಲನೆ ಆರಂಭವಾದರೂ ಮೊದಲ ದಿನ ಹೆಚ್ಚಿನ ಅಭ್ಯರ್ಥಿಗಳು ಬಂದಿರಲಿಲ್ಲ. ಆದರೆ ಎರಡನೇ ದಿನವಾದ ಇಂದು ಸುಮಾರು 500ಕ್ಕೂ ಹೆಚ್ಚು ಮಂದಿ ಬಂದಿದ್ದರು. ಹೀಗಾಗಿ ಅಭ್ಯರ್ಥಿಗಳ ಕೋರಿಕೆ ಮೇರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಎಲ್ಲಾ ಅವಶ್ಯ ಮೂಲ ದಾಖಲೆಗಳು ಮತ್ತು ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಅಭ್ಯರ್ಥಿಗಳು ಹಾಜರಾಗಬೇಕು ಎಂದು ಅವರು ಸೂಚಿಸಿದ್ದಾರೆ.
PublicNext
17/01/2025 08:38 pm