ಬೆಂಗಳೂರು: ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಆರಂಭಕ್ಕೆ ಬಹುದಿನಗಳಿಂದ ತಯಾರಿ ನಡೆಯುತ್ತಿದ್ದು, ಈಗ ಇದರ ಆರಂಭಕ್ಕೆ ಕಾಲಕೂಡಿ ಬಂದಿದೆ. ಬೆಂಗಳೂರಿನಲ್ಲಿ ನಾಳೆ ಜನವರಿ 17 ರಂದು ಯುಎಸ್ ಕನ್ಸುಲೇಟ್ ಆರಂಭವಾಗಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆಯನ್ನ ನೀಡಿದ್ದಾರೆ.
"ನನ್ನ ಪ್ರೀತಿಯ ಬೆಂಗಳೂರು, ಇದು ಅಧಿಕೃತ ಘೋಷಣೆ, ಬಹುದಿನಗಳಿಂದ ಕಾಯುತ್ತಿದ್ದ ಯುಎಸ್ ಕಾನ್ಸಲೇಟ್ ಕಚೇರಿ ಜನವರಿ 17ರಂದು ಆರಂಭವಾಗಲಿದೆ" ಎಂದು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಅಧ್ಯಕ್ಷರು ಎಕ್ಸ್ ಪೋಸ್ಟ್‌ನ ಮೂಲಕ ತಿಳಿಸಿದ್ದಾರೆ. ಇನ್ನು ಇದ ಜೊತೆಗೆ ಕಚೇರಿ ಆರಂಭವಾಗುವುದಕ್ಕೆ ಮುಖ್ಯ ಕಾರಣರಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ನಿತಿನ್ ಗಡ್ಕರಿ ಅವರನ್ನ ಶ್ಲಾಘಿಸಿದ್ದಾರೆ.
ಇನ್ನು ಈ ವೇಳೆ ಸಂಸದ ತೇಜ್ಸವಿ ಸೂರ್ಯ ಅವರು ದೆಹಲಿಗೆ ತೆರಳಿ ವಿದೇಶಾಂಗ ಸಚಿವ ಜೈಶಂಕರ್ ಅವರನ್ನ ಭೇಟಿ ಮಾಡಿ ಮೈಸೂರು ಪಾಕ್ ತಿನ್ನಿಸುವ ಮೂಲಕ ಸಚಿವರಿಗೆ ಸಂಸದ ತೇಜಸ್ವಿ ಸೂರ್ಯ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಹಾಗು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರ ಪ್ರಯತ್ನದಿಂದ ಮಾತ್ರ ಇದು ಸಾಧ್ಯವಾಗಿದೆ. ಎಂದು ಪೊಸ್ಟ್ ಮೂಲಕ ತಿಳಿಸಿದ್ದಾರೆ. ಸಧ್ಯಕ್ಕೆ ಈ ಯುಎಸ್ ಕಾನ್ಸುಲೇಟ್ ಕಚೇರಿಯನ್ನ ತಾತ್ಕಾಲಿಕವಾಗಿ ಖಾಸಗಿ ಹೋಟೆಲ್‌ನಲ್ಲಿ ಆರಂಭಮಾಡಲಿದ್ದೇವೆ. ಇದರಿಂದ ಕರ್ನಾಟಕದ ಜನರು ವೀಸಾಗಾಗಿ ಬೇರೆ ರಾಜ್ಯಗಳಿಗೆ ಹೋಗುವುದು ತಪ್ಪುತ್ತದೆ. ಮುಂದಿನ ದಿನಗಳಲ್ಲಿ ಇದರ ಕಚೇರಿಯನ್ನ ನಿರ್ಮಾಣ ಮಾಡತ್ತೇವೆ ಎಂದು ಹೇಳಿದರು.
ವೀಸಾಗಳನ್ನ ಬೇರೆ ರಾಜ್ಯಗಳಿಗೆ ಹೋಗಿ ಮಾಡಿಸುವುದು ಜನರಿಗೆ ಸಮಸ್ಯೆಯನ್ನ ನಿವಾರಿಸಲು ಯುಎಸ್ ಕಾನ್ಸುಲೇಟ್ ಕಚೇರಿಯನ್ನ ಬೆಂಗಳೂರಿನಲ್ಲೆ ಮಾಡುವ ತೀರ್ಮಾನಕ್ಕೆ ಬಂದಿದ್ದೇವೆ. ಅಲ್ಲದೆ ಇದು ಬೆಂಗಳೂರಿಗರ ಬಹುದಿನದ ಬೇಡಿಕೆಯಾಗಿದೆ ಎಂದು ಸಂಸದರು ಸ್ಪಷ್ಟನೆ ನೀಡಿದ್ರು.
PublicNext
16/01/2025 06:43 pm