", "articleSection": "Entertainment,Cinema,Cultural Activity,News,LadiesCorner,Religion", "image": { "@type": "ImageObject", "url": "https://prod.cdn.publicnext.com/s3fs-public/421698-1737109531-V1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Abhishek Udupi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪ್ರಯಾಗ್‌ರಾಜ್: ಮಹಾ ಕುಂಭಮೇಳ 2025 ಶುರುವಾಗಿದೆ. ಕುಂಭಮೇಳದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸದ್ದು ಮಾಡುತ್ತಿರುವುದು ನಾಗಸಾಧುಗಳು, ಹಾಗೂ ಅವರ ಆಚ...Read more" } ", "keywords": "Model turns nun, famous model, Mahakumbh Mela, Apsara, surprising transformation, model becomes nun, Indian model, spiritual journey, shocking revelation.,,Entertainment,Cinema,Cultural-Activity,News,LadiesCorner,Religion", "url": "https://publicnext.com/node" }
ಪ್ರಯಾಗ್‌ರಾಜ್: ಮಹಾ ಕುಂಭಮೇಳ 2025 ಶುರುವಾಗಿದೆ. ಕುಂಭಮೇಳದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸದ್ದು ಮಾಡುತ್ತಿರುವುದು ನಾಗಸಾಧುಗಳು, ಹಾಗೂ ಅವರ ಆಚಾರ ವಿಚಾರ, ಶಿವನನ್ನು ಆರಾಧಿಸುವ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಇವರ ಮಧ್ಯೆ, ಹರ್ಷಾ ರಿಚಾರಿಯಾ ಎಂಬ ಮಹಿಳೆ, ಭಾರಿ ಸದ್ದನ್ನು ಮಾಡುತ್ತಿದ್ದಾರೆ.
ಸುಂದರ ಸಾಧ್ವಿಯ ಫೋಟೋಗಳು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿವೆ.
ಮಹಾಕುಂಭದಲ್ಲಿ ಪ್ರಯಾಗರಾಜ್ ತಲುಪಿದ ಅತ್ಯಂತ ಸುಂದರ ಸಾಧ್ವಿಯ ಹೆಸರು ಹರ್ಷ ರಿಚಾರಿಯಾ..
ಹರ್ಷ ರಿಚಾರ್ಯ ಭೋಪಾಲ್ ನಿವಾಸಿ. ಪ್ರಸ್ತುತ ಅವರು ಉತ್ತರಾಖಂಡದಲ್ಲಿ ವಾಸಿಸುತ್ತಿದ್ದಾರೆ.
ಹರ್ಷ ರಿಚಾರಿಯಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಹರ್ಷ ರಿಚಾರಿಯಾ ಇನ್ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಇವರು 21 ಜನವರಿ 2019 ರಂದು ಟ್ರಾವೆಲರ್ ಹರ್ಷ ಎಂಬ ಹೆಸರಿನಲ್ಲಿ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ರಚಿಸಿದರು.
ಹರ್ಷ ರಿಚಾರಿಯಾ ಅವರು ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಕೈಲಾಶಾನಂದಗಿರಿ ಜಿ ಮಹಾರಾಜ್ ಅವರ ಶಿಷ್ಯರು ಎಂದು ಹೇಳಲಾಯಿತು. ಅವಳು ಕೇವಲ 2 ವರ್ಷಗಳ ಹಿಂದೆ ಸಾಧ್ವಿಯಾದಳು. ಇದಕ್ಕೂ ಮೊದಲು, ಹರ್ಷ ಆಂಕರ್-ಮಾಡೆಲ್ ಆಗಿರುವುದರ ಜೊತೆಗೆ, ಮೇಕಪ್ ಕಲಾವಿದೆ ಮತ್ತು ಯೋಗ ಬೋಧಕಿಯೂ ಆಗಿದ್ದಾರೆ.
ಹರ್ಷ ರಿಚಾರಿಯಾ ಸಾಧ್ವಿಯಾಗಲು ಕಾರಣವನ್ನು ವಿವರಿಸಿದ್ದಾರೆ. ಶಾಂತಿ ಬೇಕು ಎಂದು ತಾನು ಸಾಧ್ವಿಯಾಗಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಆಗ ಅವರಿಗೆ 30 ವರ್ಷ ವಯಸ್ಸು. ತಾನು ಉತ್ತರಾಖಂಡದಿಂದ ಬಂದಿದ್ದೇನೆ. ಆಚಾರ್ಯ ಮಹಾಮಂಡಲೇಶ್ವರ ಜಿ ಅವರ ಶಿಷ್ಯೆ ಎಂದು ಹೇಳಿದ್ದಾರೆ.
ಈ ಮಹಾಕುಂಭ ಮೇಳದಲ್ಲಿ ಹರ್ಷ ಮಾತನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೇವಲ ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ವಿಡಿಯೋ ಕುರಿತು ಚರ್ಚೆ ಮಾಡುತ್ತಿದ್ದಾರೆ.
PublicNext
17/01/2025 03:55 pm