ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತುಂಬಾ ಸಹಕಾರಿಯಾಗಿವೆ

ಚಿಕ್ಕಮಗಳೂರು : ರಾಜ್ಯಸರ್ಕಾರದ ಮಹತ್ವಾಕಾಂಕ್ಷೆ ಪಂಚಗ್ಯಾರಂಟಿ ಯೋಜನೆಗಳು ತಾಲ್ಲೂಕಿನ ಜನತೆಗೆ ನೆರವು ಒದಗಿಸುವಲ್ಲಿ ಮೂಲಕ ಜೀವನ ಸುಧಾರಣೆಗೆ ಆರ್ಥಿಕ ವರದಾನ ಎಂದು ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ ಹೇಳಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು. ಆರ್ಥಿಕತೆಯಿಂದ ಕುಗ್ಗಿದ್ಧ ನಾಡಿನ ಜನತೆಗೆ ಸದೃಢ ಜೀವನ ರೂಪಿಸುವ ಸಲುವಾಗಿ ಗ್ಯಾರಂಟಿ ಯೋಜನೆಗಳು ಫಲನೀಡಿವೆ. ಅಲ್ಲದೇ ದೇಶದ ಭವಿಷ್ಯ ರೂಪಿಸುವ ಯುವಕರು ನಿರುದ್ಯೋಗದಿಂದ ಬಳಲದಂತೆ ಯುವನಿಧಿ ಸೌಲಭ್ಯ ಕಲ್ಪಿಸುವ ಮುಖಾಂತರ ಆರ್ಥಿಕವಾಗಿ ಶಕ್ತಿ ತುಂಬಿದೆ ಎಂದರು.

ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 72 ಸಾವಿರ ಅರ್ಜಿದಾರರ ಪೈಕಿ 69799 ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 13 ಕೋಟಿಯಂತೆ ಆರಂಭದಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು 98 ಕೋಟಿ ಹಣವನ್ನು ಖಾತೆಗೆ ಜಮಾಯಿಸಲಾಗಿದೆ ಎಂದು ಹೇಳಿದರು.

Edited By : PublicNext Desk
PublicNext

PublicNext

17/01/2025 08:10 pm

Cinque Terre

17.55 K

Cinque Terre

0

ಸಂಬಂಧಿತ ಸುದ್ದಿ