ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್‌ದಲ್ಲಿನ ಅಚ್ಚವ್ವನ ಕಾಲೋನಿಯಲ್ಲಿ ಸಿಲೆಂಡರ್ ಸ್ಫೋಟಗೊಂಡು, 8 ಮಂದಿ ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದು, ಒಬ್ಬ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರ ಕುಟುಂಬಸ್ಥರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ, ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಸಂತಾಪ ವ್ಯಕ್ತಪಡಿಸಿ ನೆರವಿಗೆ ಮುಂದಾಗಿದ್ದಾರೆ.
ಒಬ್ಬರಿಗೆ 50,000 ರೂಪಾಯಿಯಂತೆ ಒಟ್ಟು 4.5 ಲಕ್ಷ ಧನ ಸಹಾಯ ಮಂಜೂರು ಮಾಡಿ ಅವರ ಕುಟುಂಬಕ್ಕೆ ನೀಡಿದ್ದಾರೆ.
ಇನ್ನು ಮಂಜುರಾದ ಹಣವನ್ನು ಚೆಕ್‌ಗಳ ಮೂಲಕ ಜನ ಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷರಾದ ರಾಜಣ್ಣ ಕೊರವಿ, ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಸಾಂತ್ವನ ಹೇಳಿ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಸಂತ್ ಅರಕಚಾರ್ಯ , ಧಾರವಾಡ ಜಿಲ್ಲಾ ನಿರ್ದೇಶಕರಾದ ಪ್ರದೀಪ್ ಶೆಟ್ಟಿ, ಮಾಜಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಸೋಮಲಿಂಗ ಕೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಡಾ. ರಮೇಶ ಮಹಾದೇವಪ್ಪನವರ, ಮಾರುತಿ ಶೇಟ , ಕಾಲೋನಿಯ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು ವಲಯದ ಮೇಲ್ವಿಚಾರಕರು TNO ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇವರ ಒಂದು ಕಾರ್ಯಕ್ಕೆ ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಸ್ಥರು ಕಣ್ಣೀರು ಹಾಕುತ್ತ ತಮ್ಮ ದುಖಃವನ್ನ ತೋಡಿಕೊಂಡರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/01/2025 03:39 pm