ಹುಬ್ಬಳ್ಳಿ: ಚಳಿಗಾಲ ಆರಂಭವಾದ ನಂತರ ಪಾಪ ನಿರಾಶ್ರಿತರು ಚಳಿಯಲ್ಲೇ ಅಲ್ಲಿ ಇಲ್ಲಿ ಮಲಗುತ್ತಿದ್ದರು. ಇವರ ಕಷ್ಟಕ್ಕೆ ಯುವಕರ ಗುಂಪೊಂದು ರಸ್ತೆ ಬದಿಯಲ್ಲಿ ನಡಗುತ್ತ ಮಲಗುತ್ತಿದ್ದ ನಿರಾಶ್ರಿತರಿಗೆ ನೆರವಾಗಿದ್ದಾರೆ.
ನಿಖಿಲ್ ಹಂಜಗಿ ನೇತೃತ್ವದಲ್ಲಿ, ಜೀವ ಧ್ವನಿ ಫೌಂಡೇಶನ್ ಯುವಕರ ತಂಡ ಸೇರಿಕೊಂಡು, ರಾತ್ರಿ ವೇಳೆ ಕಷ್ಟಪಟ್ಟು ದುಡಿಯುವ ಹಮಾಲರಿಗೆ ಮತ್ತು ನಿರ್ಗತಿಕರಿಗೆ ಸ್ವೆಟರ್ ವಿತರಣೆ ಮಾಡಿ, ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಹುಬ್ಬಳ್ಳಿಯ ಸಿದ್ದಾರೂಢರ ಮಠ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ಸೇರಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ ಮಲಗುತ್ತಿದ್ದ ನಿರ್ಗತಿಕರಿಗೆ ಸುಮಾರು 50 ಕ್ಕೂ ಹೆಚ್ಚು ಸ್ವೆಟರ್‌ಗಳನ್ನು ವಿತರಣೆ ಮಾಡಿ, ಅವರ ಪಾಲಿಗೆ ದೇವರಾಗಿದ್ದಾರೆ. ಈ ಯುವಕರ ಕಾರ್ಯಕ್ಕೆ ಅವಳಿ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
14/01/2025 05:52 pm