ಹುಬ್ಬಳ್ಳಿ: ಅದೊಂದು ಭೀಕರ ದುರಂತ ಹುಬ್ಬಳ್ಳಿಯನ್ನು ಮಾತ್ರವಲ್ಲದೆ ಅಯ್ಯಪ್ಪ ಸ್ವಾಮಿ ಭಕ್ತಕೋಟಿಯೇ ಕಣ್ಣೀರು ಹಾಕಿತ್ತು. ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಪೋಟದಿಂದ ಎಂಟು ಜನ ಅಯ್ಯಪ್ಪ ಮಾಲಾಧಾರಿಗಳ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಪರಮಭಕ್ತರು ಹಾಗೂ ಉದ್ಯಮಿಗಳಾದ ಡಾ.ಸಿ.ಎಚ್. ವಿ.ಎಸ್.ವಿ ಪ್ರಸಾದ್ ಮೃತರ ಕುಟುಂಬಕ್ಕೆ ನೆರವಾಗಿದ್ದಾರೆ.
ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಸಾವು ನಿಜಕ್ಕೂ ಬಹುದೊಡ್ಡ ದುರಂತವನ್ನೇ ಉಂಟುಮಾಡಿದೆ. ಹೌದು.. ಡಿಸೆಂಬರ್ 22ರಂದು ಸಿಲಿಂಡರ್ ಸ್ಪೋಟಗೊಂಡು 9 ಜನ ಗಾಯಗೊಂಡಿದ್ದರು. 9 ಜನರಲ್ಲಿ ಎಂಟು ಜನ ಮಾಲಾಧಾರಿಗಳು ಮೃತರಾಗಿದ್ದಾರೆ. ಓರ್ವ ಮಾಲಾಧಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೃತರ ಕುಟುಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನೇತೃತ್ವದಲ್ಲಿ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಎಂಟು ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ಧನಸಹಾಯದ ಚೆಕ್ ವಿತರಣೆ ಮಾಡುವ ಮೂಲಕ ಮೃತರ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಡಾ.ಸಿ.ಎಚ್.ವಿ.ಎಸ್.ವಿ.ಪ್ರಸಾದ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಇನ್ನೂ ಅಚ್ಚವ್ವನ ಕಾಲೋನಿಯಲ್ಲಿ ನಡೆದ ದುರಂತಕ್ಕೆ ಮಮ್ಮಲ ಮರುಗಿದ್ದಾರೆ. ಅಲ್ಲದೇ ಸುಮಾರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಪರಮಭಕ್ತರಾಗಿ ಸೇವೆ ಸಲ್ಲಿಸುತ್ತಿರುವ ವಿ.ಎಸ್.ವಿ ಪ್ರಸಾದ್ ಅವರು ಈಗ ಮೃತ ಕುಟುಂಬಸ್ಥರಿಗೆ ಧನ ಸಹಾಯ ಮಾಡಿರುವುದು ಹೃದಯವಂತಿಕೆಯನ್ನು ಎತ್ತಿ ತೋರಿಸುತ್ತದೆ. ಶಾಸಕ ಮಹೇಶ್ ಟೆಂಗಿನಕಾಯಿ,ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಕೂಡ ಭಾಗವಹಿಸಿದ್ದು, ವಿ.ಎಸ್.ವಿ ಪ್ರಸಾದ್ ಅವರ ಕಾರ್ಯಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ನೊಂದವರ ಧ್ವನಿಯಾಗಿ, ಕಣ್ಣೀರು ಒರೆಸುವ ಕಾರ್ಯವನ್ನು ವಿ.ಎಸ್.ವಿ ಪ್ರಸಾದ್ ಅವರು ಮಾಡುತ್ತಲೇ ಬಂದಿದ್ದು, ಈಗ ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿರುವುದು ನಿಜಕ್ಕೂ ವಿಶೇಷವಾಗಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/01/2025 08:13 pm