", "articleSection": "Politics,Human Stories,International", "image": { "@type": "ImageObject", "url": "https://prod.cdn.publicnext.com/s3fs-public/286525-1736594009-WhatsApp-Image-2025-01-11-at-4.43.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಕನ್ನಡಿಗರ ಕೀರ್ತಿ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪಸರಿಸುತ್ತಿದೆ. ಕೆನಡಾದ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ಮತ್ತು ಲಿಬರ...Read more" } ", "keywords": "Chandra Arya, Canadian PM Race, Hubballi, Karnataka, Indian Origin Canadian, Canadian Politics, Justin Trudeau, Leadership Race, Liberal Party Canada, Chandra Arya MBA, Education, Indian Diaspora.,Hubballi-Dharwad,Politics,Human-Stories,International", "url": "https://publicnext.com/node" }
ಹುಬ್ಬಳ್ಳಿ: ಕನ್ನಡಿಗರ ಕೀರ್ತಿ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪಸರಿಸುತ್ತಿದೆ. ಕೆನಡಾದ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ಮತ್ತು ಲಿಬರಲ್ ಪಕ್ಷದ ಸ್ಥಾನವನ್ನು ತೊರೆದ ನಂತರ, ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ ಅವರು ದೇಶವನ್ನು "ಸಾರ್ವಭೌಮ ಗಣರಾಜ್ಯ" ಮಾಡುವ ಭರವಸೆಯೊಂದಿಗೆ ಲಿಬರಲ್ ನಾಯಕತ್ವಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಅವರು ಧಾರವಾಡದ ಕೌಸಾಳಿಯಲ್ಲಿ ಅಧ್ಯಯನ ಮಾಡಿದ್ದರೆಂಬುದು ವಿಶೇಷ.
ಕೆನಡಾದ ಒಟ್ಟಾವಾದಿಂದ ಸಂಸದರಾದ ಚಂದ್ರ ಆರ್ಯ ಅವರು ಲಿಬರಲ್ ನಾಯಕತ್ವಕ್ಕೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಈಗ ಕೆನಡಾದ ಪ್ರಧಾನಮಂತ್ರಿ ರೇಸ್‌ನಲ್ಲಿದ್ದಾರೆ.
ಹೌದು.. ಕರ್ನಾಟಕದ ತುಮಕೂರಿನ ಶಿರಾ ತಾಲೂಕಿನ ಮೂಲದವರಾಗಿದ್ದು, ಶಿಕ್ಷಣಕ್ಕಾಗಿ ಧಾರವಾಡದಲ್ಲಿ ವಾಸವಾಗಿದ್ದರು. ಸದ್ಯ ಅವರು ಕೆನಡಾದ ಪ್ರಧಾನಿ ಹುದ್ದೆಗೆ ಉಮೇದುವಾರಿಕೆ ಘೋಷಿಸಿದ್ದು, ತಮ್ಮ ಅಭಿಯಾನವು ಕೆನಡಾವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡುವುದು, ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದು, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಗಳನ್ನು ಪರಿಚಯಿಸುವುದು ಮತ್ತು ಪ್ಯಾಲೆಸ್ಟೈನ್ ಅನ್ನು ಗುರುತಿಸುವುದನ್ನು ಒಳಗೊಂಡಿದೆ.
ಆರ್ಥಿಕತೆಯನ್ನು ಪುನರ್ ನಿರ್ಮಾಣ ಮಾಡುವ ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸಣ್ಣ, ದಕ್ಷ ಕೆನಡಾ ಸರ್ಕಾರವನ್ನು ಮುನ್ನಡೆಸುವ ಗುರಿಯನ್ನು ಆರ್ಯ ಹೊಂದಿದ್ದಾರೆ.
ಇನ್ನೂ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಅಲ್ಲಿನ ಸಂಸತ್‌ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಚಂದ್ರ ಆರ್ಯ ಅವರು ಕೌಸಾಳಿಯಲ್ಲಿ 1986-88ರಲ್ಲಿ ಎಂಬಿಎ ಪದವಿ ಪಡೆದಿದ್ದು, ಚಂದ್ರ ಆರ್ಯ ಅವರ ಎಂಬಿಎ ಶಿಕ್ಷಣದ ಹಾಗೂ ಧಾರವಾಡ ಒಡನಾಟದ ಬಗ್ಗೆ ಕೌಸಾಳಿಯ ಮಾಜಿ ಡೀನ್ ಹಾಗೂ ಚಂದ್ರ ಆರ್ಯ ಅವರ ಗುರುಗಳಾದ ಡಾ.ಅಶೋಕ ಚಚಡಿಯವರು, ಪಬ್ಲಿಕ್ ನೆಕ್ಸ್ಟ್ ಜೊತೆಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/01/2025 04:43 pm