", "articleSection": "Health & Fitness,Human Stories", "image": { "@type": "ImageObject", "url": "https://prod.cdn.publicnext.com/s3fs-public/235762-1737046468-WhatsApp-Image-2025-01-16-at-7.47.29-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮಂಗಳೂರು: ನಾಲ್ಕು ತಿಂಗಳ ಶಿಶುವಿಗೆ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ಹೃದಯ ಸಮಸ್ಯೆಯನ್ನು ಗುಣಪಡಿಸಿದ ಅಪರೂಪದ ಚಿಕಿತ್ಸೆ ಮಂಗಳೂರಿನ ಕೆಎಂಸಿ...Read more" } ", "keywords": "Mangalore, KMC Hospital, pediatric cardiology, congenital heart defect, non-surgical treatment, infant heart treatment, medical miracle, KMC doctor, Mangalore news, Karnataka medical news, pediatric care, cardiology treatment. ,Udupi,Health-and-Fitness,Human-Stories", "url": "https://publicnext.com/node" } ಮಂಗಳೂರು: ಶಸ್ತ್ರಚಿಕಿತ್ಸೆಯಿಲ್ಲದೇ 4 ತಿಂಗಳ ಶಿಶುವಿಗೆ ಹೃದಯ ಸಮಸ್ಯೆ ಗುಣಪಡಿಸಿದ ಕೆಎಂಸಿ ವೈದ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶಸ್ತ್ರಚಿಕಿತ್ಸೆಯಿಲ್ಲದೇ 4 ತಿಂಗಳ ಶಿಶುವಿಗೆ ಹೃದಯ ಸಮಸ್ಯೆ ಗುಣಪಡಿಸಿದ ಕೆಎಂಸಿ ವೈದ್ಯ

ಮಂಗಳೂರು: ನಾಲ್ಕು ತಿಂಗಳ ಶಿಶುವಿಗೆ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ಹೃದಯ ಸಮಸ್ಯೆಯನ್ನು ಗುಣಪಡಿಸಿದ ಅಪರೂಪದ ಚಿಕಿತ್ಸೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಡೆದಿದೆ.

ಶಿಶು ಜನಿಸುವ ಮೊದಲು ಭ್ರೂಣವಸ್ಥೆಯಲ್ಲಿ ಅಪದಮನಿ ಹಾಗೂ ಅಭಿದಮನಿ ತೆರೆದ ರೀತಿಯಲ್ಲಿ ಇರುತ್ತದೆ. ಶಿಶು ಜನಿಸುತ್ತಿದ್ದಂತೆ ಅದು ಮುಚ್ಚಲ್ಪಡುತ್ತದೆ. ಆದರೆ ಈ ಶಿಶುವಿಗೆ ಮಾತ್ರ ಜನಿಸಿದ ಬಳಿಕವು ಅದು ತೆರೆದೇ ಇತ್ತು. ಪರಿಣಾಮ ಶಿಶು ಹೃದಯ ಸಮಸ್ಯೆಯಿಂದ ಬಳಲುತ್ತಿತ್ತು.

ಆದ್ದರಿಂದ ಈ ಶಿಶು ಬೇರೆ ಆಸ್ಪತ್ರೆಯಿಂದ ಕೆ.ಎಂ.ಸಿ ಆಸ್ಪತ್ರೆಗೆ ತುರ್ತುಚಿಕಿತ್ಸೆಗೆಂದು ದಾಖಲಾಗಿತ್ತು. ಆದರೆ ಶಿಶು ಅನುಭವಿಸುತ್ತಿದ್ದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಹಾಗೂ ಅನಸ್ತೇಶಿಯಾ ನೀಡುವುದು ಸವಾಲಿನದ್ದಾಗಿತ್ತು. ಉಸಿರಾಟದ ಸೋಂಕಿನ ಕಾಯಿಲೆಯಿಂದ ಬಳಲುತ್ತಿರುವ ಶಿಶುವಿಗೆ ಶಸ್ತ್ರಚಿಕಿತ್ಸೆಯಿಲ್ಲದೇ PDA ( ಅಪದಮನಿ ಮತ್ತು ಅಭಿದಮನಿಯ ನಡುವಿನ ತೂತು) ಮುಚ್ಚುವುದು ಮಾತ್ರ ಏಕೈಕ ಪರಿಹಾರವಾಗಿತ್ತು.

ಈ ಚಿಕಿತ್ಸೆಗೆ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಿಗೆ ಅರಿವಳಿಕೆ ತಜ್ಞರು ಹಾಗೂ ಕ್ಯಾಥ್ ಲ್ಯಾಬ್ ತಜ್ಞರು ಸಾಥ್ ನೀಡಿದರು. ಅತಿಯಾದ ಕಡಿಮೆ ತೂಕದಿಂದ ಬಳಲುತ್ತಿದ್ದ ಶಿಶುವಿಗೆ ತಜ್ಞರ ತಂಡವು ಭಾರೀ ಜಾಗರೂಕತೆ ಮೂಲಕ ಚಿಕಿತ್ಸೆ ನೀಡುವಲ್ಲಿ ಯಶಸ್ಸು ಕಂಡಿದೆ.

Edited By : Nagaraj Tulugeri
PublicNext

PublicNext

16/01/2025 10:24 pm

Cinque Terre

31.07 K

Cinque Terre

2

ಸಂಬಂಧಿತ ಸುದ್ದಿ