ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಫುಲ್‌ಪ್ಯಾಕ್ ಕಾಮಿಡಿ ತುಳು ಸಿನಿಮಾ ಮಾಡುವ ಆಸೆ- ಬಾಲಿವುಡ್ ನಟ ಸುನಿಲ್ ಶೆಟ್ಟಿ

ಮಂಗಳೂರು: ನಾನು ಮುಂಬೈನಲ್ಲಿ ಬೆಳೆದರೂ, ಹುಟ್ಟೂರು ತುಳುನಾಡಿನ ಬಗ್ಗೆ ಅತೀವ ಹೆಮ್ಮೆ ಇದೆ. ಇಲ್ಲಿನ ಸಂಸ್ಕೃತಿ, ಜಾಗ ಅದ್ಭುತ. ಮುಂದೊಂದು ದಿನ ಪೂರ್ಣ ಪ್ರಮಾಣದಲ್ಲಿ ತುಳು ಸಿನಿಮಾ ಮಾಡುವ ಆಸೆಯಿದೆ ಎಂದು ಹೆಸರಾಂತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಹೇಳಿದ್ದಾರೆ.

ಬಿಗ್‌ಬಾಸ್ ವಿನ್ನರ್, ನಟ ರೂಪೇಶ್ ಶೆಟ್ಟಿ ಅಭಿನಯ ಹಾಗೂ ನಿರ್ದೇಶನದ ಜೈ ತುಳು ಸಿನಿಮಾದಲ್ಲಿ ಅಭಿನಯಿಸಲು ಎರಡು ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿರುವ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ತುಳು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಅಭಿನಯ ಮಾಡುತ್ತಿದ್ದೇನೆ. ತುಳು ಸಿನಿಮಾದವರು ತಾನು ತುಳು ಸಿನಿಮಾದಲ್ಲಿ ನಟಿಸಬೇಕೆಂದು ನಿರಂತರವಾಗಿ ಕೇಳುತ್ತಾ ಬಂದಿದ್ದರೂ ಸಮಯಾವಕಾಶ ಕೂಡಿ ಬಂದಿರಲಿಲ್ಲ. ಈಗ ಜೈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದೇನೆ.‌ ಇದನ್ನೂ ಮೀರಿ ಪೂರ್ಣ ಪ್ರಮಾಣದಲ್ಲಿ ತುಳು ಕಾಮಿಡಿ ಸಿನಾ ಮಾಡುವ ಆಸೆಯಿದೆ. ಕಾಮಿಡಿ ಎನ್ನುವುದು ಯೂನಿವರ್ಸಲ್ ಭಾಷೆ, ಹಾಗಾಗಿ ಕಾಮಿಡಿ ಆಯ್ದುಕೊಂಡಿರುವುದಾಗಿ ಹೇಳಿದರು.

ಮಲಯಾಳಂ, ಬೆಂಗಾಲಿ, ಮರಾಠಿ ಭಾಷೆಗಳ ಸಿನಿಮಾಗಳು ಜಗತ್ತಿನ ಗಮನ ಸೆಳೆಯುತ್ತಿರುವುದು ಬಜೆಟ್‌ನಿಂದಲ್ಲ. ಇದು ಸಾಧ್ಯವಾದದ್ದು, ಸಿನಿಮಾದ ವಿಷಯದಿಂದ. ತುಳು ಭಾಷೆಗೂ ಇಂತಹ ಸಾಮರ್ಥ್ಯ ಇದೆ. ಆದರೆ ತುಳುನಾಡಿನ ಸಮಸ್ಯೆ ಎಂದರೆ, ಇಲ್ಲಿ ಕಲಿತು ಬೇರೆ ಕಡೆ ಕೆಲಸಕ್ಕೆ ತೆರಳುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಹೀಗೇ ಆಗಿದೆ. ಸಿನಿಮಾದ ಸಬ್ಜೆಕ್ಟ್ ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎಂದು ಸುನಿಲ್ ಶೆಟ್ಟಿ ಹೇಳಿದರು.

Edited By : Nagaraj Tulugeri
PublicNext

PublicNext

16/01/2025 10:56 pm

Cinque Terre

10.46 K

Cinque Terre

0

ಸಂಬಂಧಿತ ಸುದ್ದಿ