ಮಂಗಳೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ವಿಚಾರವಾಗಿ ಮಂಗಳೂರಿನಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಸೈಫ್ ಅಲಿ ಖಾನ್‌ಗೆ ಏನಾಗಿದೆ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ವಿಚಾರ ನನಗೆ ಗೊತ್ತಾದ ತಕ್ಷಣ ನಾನು ಒಂದೇ ಅಂದುಕೊಂಡದ್ದು ಅವರು ಪ್ರಾಣಾಪಾಯದಿಂದ ಪಾರಾಗಲಿ. ಸೆಕ್ಯೂರಿಟಿ ಸಮಸ್ಯೆ ಆಗಿದೆಯೆಂದು ಕಾಣುತ್ತದೆ ಎಂದರು.
ನನಗೆ ತುಂಬಾ ತಡವಾಗಿ ವಿಚಾರ ತಿಳಿದು ಬಂದಿದೆ. ಈಗ ಔಟ್ ಆಫ್ ಡೇಂಜರ್, ರಿಕವರಿ ಆಗುತ್ತಿದ್ದಾರೆ ಎಂದು ಸುನಿಲ್ ಶೆಟ್ಟಿ ಹೇಳಿದರು.
PublicNext
16/01/2025 10:43 pm