ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೈಕಲ್‌ನಲ್ಲೇ ಶಬರಿಮಲೆ ಯಾತ್ರೆ, ದಾರಿಯುದ್ದಕ್ಕೂ ಪರಿಸರ, ವಾಯುಮಾಲಿನ್ಯ ಕುರಿತು ಜಾಗೃತಿ

ಉಡುಪಿ : ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಿಂದ ಸೈಕಲ್ ಮೂಲಕ ಎಂಟು ಜನರ ತಂಡ ಶಬರಿಮಲೆ ಯಾತ್ರೆಗೆ ಹೊರಟಿದೆ.ಈ ತಂಡವು ಧಾರ್ಮಿಕ ಕ್ಷೇತ್ರಕ್ಕೆ ಹೊರಟಿದ್ದರೂ ದಾರಿ ಮಧ್ಯೆ ಪರಿಸರ ಸಂರಕ್ಷಣೆ ಮತ್ತು ವಾಯುಮಾಲಿನ್ಯ ಕುರಿತು ಜಾಗೃತಿ ಮೂಡಿಸುತ್ತಿರುವುದು ವಿಶೇಷ.

ಈ ತಂಡವು ದಿನಕ್ಕೆ 100 ರಿಂದ 150 ಕಿ.ಮೀ ಸೈಕಲ್ ತುಳಿದು ಯಾತ್ರೆಯನ್ನು ಸಾಗಿಸುತ್ತದೆ. ರಾತ್ರಿ ದೇವಾಲಯಗಳಲ್ಲಿ ಉಳಿದುಕೊಂಡು ಮರುದಿನ ಶಬರಿಮಲೆ ಯಾತ್ರೆ ಆರಂಭಿಸುತ್ತದೆ. ಕೃಷಿ ಹಿನ್ನೆಲೆಯ 8 ಮಂದಿಯ ಯುವಕರ ತಂಡ ಸಾಗುವ ದಾರಿಯಲ್ಲಿ ಪರಿಸರ ಸಂರಕ್ಷಣೆ ಮತ್ತು ವಾಯುಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು ಜನರ ಗಮನ ಸೆಳೆದಿದೆ

Edited By : Manjunath H D
PublicNext

PublicNext

14/01/2025 05:02 pm

Cinque Terre

28.66 K

Cinque Terre

0