ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನಂದಿ ರಥಯಾತ್ರೆಗೆ ಶಾಸಕ ಗಂಟಿಹೊಳೆ ಅದ್ಧೂರಿ ಸ್ವಾಗತ

ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರಿಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ನಿಂದ ಡಿಸೆಂಬರ್ 31ರಿಂದ ಮಾರ್ಚ್ 29ರ ವರೆಗೆ ರಾಜ್ಯಾದ್ಯಂತ ನಡೆಯಲಿರುವ ನಂದಿ ರಥಯಾತ್ರೆಯನ್ನು ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ ಉಪ್ಪುಂದದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭ ನಂದಿ ರಥಯಾತ್ರೆಯ ಗೋವಿಗೆ ಹಣ್ಣು ಹಂಪಲು ನೀಡಿ ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ರಥಯಾತ್ರೆ ನಡೆಸಲಾಯಿತು. ವಿವಿಧ ಭಜನಾ ತಂಡಗಳು ಮೆರವಣಿಗೆಯುದ್ಧಕ್ಕೂ ಕುಣಿತ ಭಜನೆಯ ಮೂಲಕ ಶ್ರೀ ಕೃಷ್ಣ ದೇವರು ಮತ್ತು ಗೋವಿನ ರಥಯಾತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ನಂದಿ ರಥಯಾತ್ರೆಯು ವಿಷ ಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ 1,11,108 ವಿಷ್ಣು ಸಹಸ್ರನಾಮ ಪಠಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ, ಗೋ ಕಥೆ, ಮನೆ ಮನೆಯಲ್ಲಿ ಗೋವು, ಗವ್ಯ ಉತ್ಪನ್ನ ಬಳಕೆ ಪ್ರಚಾರ, ದೇಸೀ ಗೋ ಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಸೀ ಗೋ ಮಾತೆ ಹಾಗೂ ಭೂ ಮಾತೆಗೆ ಇರುವ ಸಂಬಂಧ ಜನರಿಗೆ ತಿಳಿಸುವುದು, ಗೋ ಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರಕಿಸುವುದು, ಸಹಜ ಕೃಷಿ ವಿಸ್ತರಣೆ, ಸ್ವದೇಶಿ/ಗವ್ಯ ಉತ್ಪನ್ನ ಬಳಕೆ, ದೇಸೀ ಬೀಜ ಸಂರಕ್ಷಣೆ, ಧರ್ಮ ಜಾಗೃತಿ, ಸಾಮಾಜಿಕ ಸಾಮರಸ್ಯ, ಗ್ರಾಮ ವಿಕಾಸ, ಭಾರತೀಯ ಕುಟುಂಬ ಪದ್ಧತಿ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಟಿ, ಋಣಮುಕ್ತ ಭಾರತ, ಸಮೃದ್ಧ ಭಾರತ, ವಿಶ್ವಗುರು ಭಾರತದ ಉದ್ದೇಶ ಹೊಂದಿದೆ.

88 ದಿನಗಳ ಕಾಲ ನಡೆಯುತ್ತಿರುವ ಈ ರಥಯಾತ್ರೆಯಲ್ಲಿ 9 ಮಂದಿ ಕಾರ್ಯಕರ್ತರು ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಸೇರಿದಂತೆ ನೂರಾರು ಮಂದಿ ಭಕ್ತರು ರಥಯಾತ್ರೆಯಲ್ಲಿ ಪಾಲ್ಗೊಂಡರು.

Edited By : Ashok M
PublicNext

PublicNext

15/01/2025 08:37 am

Cinque Terre

18.57 K

Cinque Terre

0

ಸಂಬಂಧಿತ ಸುದ್ದಿ