ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಮಕರ ಸಂಕ್ರಾಂತಿಯ ಪ್ರಯುಕ್ತ ಮಾಲ್ತಿದ್ವೀಪದಲ್ಲಿ ವಿಶೇಷ ಪೂಜೆ- ಹೀಗೊಂದು ವಿಶಿಷ್ಟ ಸಂಪ್ರದಾಯ

ಮಲ್ಪೆ: ಇಂದು ಮಕರ ಸಂಕ್ರಾಂತಿಯ ಪ್ರಯುಕ್ತ ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಯಿತು. ಈ ದಿನ ಅಪರೂಪದ ಒಂದು ವಿಶಿಷ್ಟ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಮುದ್ರದ ನಡುವಿನ ಮಾಲ್ತಿದ್ವೀಪದಲ್ಲಿ ದೇವರ ಸನ್ನಿಧಾನ ಇದೆ ಎಂಬ ನಂಬಿಕೆ ಇದೆ. ಹಾಗಾಗಿ ವರ್ಷಂಪ್ರತಿ ಮಕರ ಸಂಕ್ರಾಂತಿಯ ದಿನ ಭಕ್ತರೆಲ್ಲರೂ ಬೋಟುಗಳಲ್ಲಿ ತೆರಳಿ, ಪೂಜೆ ಸಲ್ಲಿಸುತ್ತಾರೆ.

ಇದೇ ವೇಳೆ ಸಮುದ್ರಕ್ಕೂ ಪೂಜೆಯನ್ನು ಸಲ್ಲಿಸುವ ಮೂಲಕ, ಮತ್ಸ್ಯ ಸಂಪತ್ತು ಹೇರಳವಾಗಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತದೆ. ನಡು ದ್ವೀಪದಲ್ಲಿ ನಡೆಯುವ ಅಪರೂಪದ ಸಂಪ್ರದಾಯದಲ್ಲಿ ಸ್ಥಳೀಯ ಭಕ್ತರು ಹಾಗೂ ಮೀನುಗಾರರು ಭಾಗವಹಿಸುತ್ತಾರೆ. ಸಮುದ್ರ ಮಾರ್ಗವಾಗಿ ತೆರಳಿ ನಡೆಸಿ ಬರುವ ಈ ಪೂಜೆ, ವಿಶಿಷ್ಟ ಅನುಭವ ನೀಡುತ್ತದೆ. ಆರೋಡ ಪ್ರಶ್ನೆಯಲ್ಲಿ ಮಾಲ್ತಿದ್ವೀಪದ ಒಳಗೆ ದೇವರ ಸನ್ನಿಧಾನ ಇರುವುದು ಪತ್ತೆಯಾದ ನಂತರ, ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

Edited By : Suman K
Kshetra Samachara

Kshetra Samachara

15/01/2025 01:03 pm

Cinque Terre

1.8 K

Cinque Terre

0

ಸಂಬಂಧಿತ ಸುದ್ದಿ