ಮಂಗಳೂರು: ಪ್ರಯಾಗರಾಜ್‌ನಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ ಆರಂಭಗೊಂಡಿದೆ. ಈ ಮಹಾಕುಂಭ ಮೇಳದ ಮೂರು ಪ್ರಮುಖ ದ್ವಾರಗಳಿಗೆ ದ.ಕ.ಜಿಲ್ಲೆಯ ಮೂಡುಬಿದಿರೆಯ ಲೆಕ್ಸಾ ಸಂಸ್ಥೆ ದೀಪಾಲಂಕಾರ ಮಾಡಿದೆ.
ಪ್ರಯಾಗರಾಜ್‌ನ ಕುಂಭಮೇಳ ನಡೆಯುವ ಪುಣ್ಯಭೂಮಿಗೆ ಪ್ರವೇಶಿಸುವ ಪ್ರಮುಖ ಮುಖದ್ವಾರಗಳಾದ ಗಂಗಾ ದ್ವಾರ, ಯಮುನಾ ದ್ವಾರ ಹಾಗೂ ಸರಸ್ವತಿ ದ್ವಾರಗಳಿಗೆ ದೀಪಾಲಂಕಾರ ಮಾಡುವ ಸದವಕಾಶ ಲೆಕ್ಸಾ ಸಂಸ್ಥೆಗೆ ದೊರಕಿದೆ.
ಈ ಹಿಂದೆ ಲೆಕ್ಸಾ ಲೈಟಿಂಗ್ ಸಂಸ್ಥೆ ಅಯೋಧ್ಯೆ, ಬೆಳಗಾವಿಯ ಸುವರ್ಣ ವಿಧಾನಸೌಧ, ಬಿರ್ಲಾ ಮಂದಿರ, ಧರ್ಮಪುರದ ಜಿನ್ ಮಂದಿರ ಹಾಗೂ ಇನ್ನೂ ನೂರಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ಶಾಶ್ವತ ದೀಪಾಲಂಕಾರದ ಮೂಲಕ ತನ್ನ ಕೈಚಳಕ ತೋರಿಸಿತ್ತು. ಹೀಗೆ ಜನಮನ್ನಣೆಗೆ ಪಾತ್ರವಾದ ಲೆಕ್ಸಾ ಲೈಟಿಂಗ್ ಸಂಸ್ಥೆಯ ಹಿರಿಮೆಗೆ ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲೂ ದೀಪಾಲಂಕಾರದ ಅವಕಾಶ ದೊರಕಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಚಾರ.
PublicNext
14/01/2025 09:43 pm