ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಧರ್ಮ ಜಾಗೃತಿ-ಲಕ್ಷ್ಮೀನಾರಾಯಣ ಆಸ್ಪಣ್ಣ

ಮುಲ್ಕಿ: ದಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧರ್ಮ ಜಾಗೃತಿ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಅಭಿನಂದನೀಯ ಎಂದು ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು

ಅವರು ಕಿನ್ನಿಗೋಳಿಯ ಯಕ್ಷಲಹರಿ ಯುಗಪುರುಷದ ಸಹಯೋಗದೊಂದಿಗೆ ಯುಗಪುಋಷ ಸಭಾಭವನ ಕಾರ್ಯಕ್ರಮದಲ್ಲಿ ನಡೆದ ಮಕರ ಸಂಕ್ರಾಂತಿಯ ತಾಳಮದ್ದಳೆ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ವಹಿಸಿದ್ದರು

ಮುಖ್ಯ ಅತಿಥಿಗಳಾಗಿ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಯುಗಪುರುಷ ಸಂಪಾದಕ ಕೆ.ಭುವನಾಭಿರಾಮ ಉಡುಪ ಯಕ್ಷ ಲಹರಿ ಸಂಸ್ಥೆಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ , ಪದಾಧಿಕಾರಿಗಳಾದ

ಎಸ್ ಪಶುಪತಿ ಶಾಸ್ತ್ರಿ,ವಿನಯ ಆಚಾರ್, ಶ್ರೀವತ್ಸ ಎಸ್.ಆರ್, ವಸಂತ ದೇವಾಡಿಗ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಯಕ್ಷಲಹರಿಯ ಅಧ್ಯಕ್ಷರಾದ ರಘುನಾಥ ಕಾಮತ್ ಕೆಂಚನಕೆರೆ ಸ್ವಾಗತಿಸಿ, ಪಶುಪತಿ ಶಾಸ್ತ್ರಿ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಂಗಕರ್ತ ಅಂಡಾಲ ದೇವಿಪ್ರಸಾದ್ ಶೆಟ್ಟಿ ರವರಿಗೆ ರವರಿಗೆ ಕವಿ ಸನ್ಮಾನ ಮಾಡಿ ಗೌರವಿಸಲಾಯಿತು.

ಬಳಿಕ ಯಕ್ಷಲಹರಿಯ ತಂಡದಿಂದ ವಿಶ್ವಾಮಿತ್ರ -ಮೇನಕೆ,ಅಂಗದ ಸಂಧಾನ ತಾಳಮದ್ದಳೆ ನಡೆಯಿತು.

Edited By : PublicNext Desk
Kshetra Samachara

Kshetra Samachara

14/01/2025 07:52 pm

Cinque Terre

786

Cinque Terre

0