ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬಂಡೀಮಠ ನಾಗರಡಿಯಲ್ಲಿ ಸಂಕ್ರಾಂತಿ ಉತ್ಸವ- ನಾಗಮಂಡಲ ವೈಭವ

ಬ್ರಹ್ಮಾವರ: ಬಾರಕೂರು ಬಂಡೀಮಠ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಕ್ಷೇತ್ರ ನಾಗರಡಿಯಲ್ಲಿ ಮಕರ ಸಂಕ್ರಮಣ ಉತ್ಸವದ ಅಂಗವಾಗಿ ಸೋಮವಾರ ಮತ್ತು ಮಂಗಳವಾರ ವೇದಮೂರ್ತಿ ರಮೇಶ್ ಭಟ್ ನಾಯರ್ ಬೆಟ್ಟು ಮತ್ತು ಅರ್ಚಕ ಜಯರಾಮ ಅಡಿಗ ಇವರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.

ಮಂಗಳವಾರ ನಸುಕಿನ ಉತ್ತರಾಯಣದ ಪ್ರಥಮ ಸೂರ್ಯೋದಯದ ಸಮಯದಲ್ಲಿ ನಾಗಪಾತ್ರಿ ನೀಲಾವರ ಲಕ್ಷ್ಮೀನಾರಾಯಣ ಮಧ್ಯಸ್ಥ ಮತ್ತು ಕೃಷ್ಣಪ್ರಸಾದ್ ವೈದ್ಯ ಮತ್ತು ಬಳಗ ಮುದ್ದೂರು ಇವರಿಂದ ನಾಗಮಂಡಲೋತ್ಸವ ಜರುಗಿತು.

ಬಳಿಕ ತುಲಾಭಾರ ಮತ್ತು ಸ್ವರಸೇವೆ ಜರುಗಿತು. ಸಹಸ್ರಾರು ಭಕ್ತಾದಿಗಳು ನಾನಾ ಪೂಜೆ ಮತ್ತು ಮಕರ ಸಂಕ್ರಮಣ ಉತ್ಸವದಲ್ಲಿ ಭಾಗಿಯಾದರು. ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

Edited By : Suman K
Kshetra Samachara

Kshetra Samachara

15/01/2025 03:07 pm

Cinque Terre

2.05 K

Cinque Terre

1

ಸಂಬಂಧಿತ ಸುದ್ದಿ