ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : 90 ರ ವಯಸ್ಸಿನಲ್ಲೂ ಆಟೋರಿಕ್ಷಾ ಓಡಿಸುವ "ಆಟೋಅಜ್ಜ'- ಈ ಆಟೋರಾಜನ ಜೀವನೋತ್ಸಾಕ್ಕೆ ಯುವಕರೇ ನಾಚಬೇಕು

ಮಂಗಳೂರು : ಅರುವತ್ತಕ್ಕೆ ಸಾಮಾನ್ಯ ಎಲ್ಲರೂ ರಿಟೈರ್‌ಮೆಂಟ್‌ ಆಗಿ ಮನೆಯಲ್ಲಿ ಇರಲು ಬಯಸುತ್ತಾರೆ. ಆದರೆ ಇಲ್ಲೊಬ್ಬರು ವಯಸ್ಸು ತೊಂಬತ್ತಾದರೂ ಇನ್ನೂ ಆಟೋರಿಕ್ಷಾ ಓಡಿಸುತ್ತಾ ಯಾರಿಗೂ ಭಾರವಾಗದೆ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಯುವಕರೇ ನಾಚುವಂತೆ ಆಟೋ ಓಡಿಸುವ ಈ ಆಟೋರಾಜ ಯಾರು ಗೊತ್ತಾ ಅದಕ್ಕೆ ಈ ಸ್ಟೋರಿ ನೋಡಿ

ಹೀಗೆ ಆಟೋ ಓಡಿಸುವ ಈ ವೃದ್ಧ ಆಟೋ ಚಾಲಕನ ದೇಹಕ್ಕೆ ವಯಸ್ಸಾಗಿದೆ ಆದರೆ, ಇವರ ಜೀವನೋತ್ಸಹಕ್ಕೆ ವಯಸ್ಸಾಗಿಲ್ಲ. ಇವರು ಬದುಕಿನಲ್ಲಿ 70ವರ್ಷಕ್ಕೂ ಅಧಿಕ ಕಾಲ ವಾಹನ ಚಾಲಕರಾಗಿಯೇ ವೃತ್ತಿ‌ ನಿರ್ವಹಿಸಿದವರು‌. ಇವರ ಹೆಸರು ಜಯರಾಮ್ ನಾಯ್ಕ, ಮಂಗಳೂರಿನ ಕೊಂಚಾಡಿಯಲ್ಲಿ ಇವರು ಆಟೋ ಚಾಲಕರಾಗಿ ಬಹಳ ಫೇಮಸ್. ಸುಮಾರು 40ವರ್ಷಕ್ಕೂ ಅಧಿಕ ಕಾಲ ಲಾರಿ ಡೈವರ್ ಆಗಿದ್ದ ಇವರು, ಕಳೆದ 30 ವರ್ಷಗಳಿಂದ ಆಟೋ ಓಡಿಸುತ್ತಿದ್ದಾರೆ.

ಮನೆಯವರು ಚಾಲಕ ವೃತ್ತಿಗೆ ಗುಡ್‌ಬೈ ಹೇಳಿ ಮನೆಯಲ್ಲಿ ನಿವೃತ್ತಿ ಜೀವನ ಸಾಗಿಸಿ ಎಂದು ಒತ್ತಾಯ ಮಾಡಿದರೂ, ತಮ್ಮ ಖರ್ಚನ್ನು ತಾವೇ ನಿಭಾಯಿಸಬೇಕೆಂದು ಈ 90ರ ವಯಸ್ಸಿನಲ್ಲೂ ಇವರು ದುಡಿಯುತ್ತಿದ್ದಾರೆ. ಯಾವುದೇ ಸಮಯದಲ್ಲಿ, ಯಾರೇ ಕರೆದರೂ ಪ್ರಾಮಾಣಿಕವಾಗಿ, ಸುರಕ್ಷಿತವಾಗಿ ಪ್ರಯಾಣಿಕರನ್ನು ಕರೆದೊಯ್ಯವ ಜಯರಾಮ್ ಅಜ್ಜನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಕೊಂಚಾಡಿ ಆಟೋ ಪಾರ್ಕ್‌ನಲ್ಲಿ ಇತರೆ ಆಟೋ ಚಾಲಕರ ಜೊತೆ ಚೆನ್ನಾಗಿ ಬೆರೆತು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ವಯಸ್ಸು ತೊಂಬತ್ತಾದರೂ ಆಟೋದಲ್ಲಿ ದುಡಿದು ಜೀವನ ಸಾಗಿಸುವ ಜಯರಾಮ್ ನಾಯ್ಕ್ ಅವರು ಯುವಕರಿಗೆ ನಿಜವಾಗಿಯೂ ಸ್ಪೂರ್ತಿಯಾಗಿದ್ದಾರೆ. ಬದುಕನ್ನು ಅದ್ಭುತವಾಗಿ ಸ್ವೀಕರಿಸಿರುವ ಈ ಶ್ರಮಜೀವಿಯ ಕಾರ್ಯ ಎಲ್ಲರಿಗೂ ಮಾದರಿ.

Edited By : Shivu K
PublicNext

PublicNext

16/01/2025 04:41 pm

Cinque Terre

24.3 K

Cinque Terre

0

ಸಂಬಂಧಿತ ಸುದ್ದಿ