", "articleSection": "Education,Government", "image": { "@type": "ImageObject", "url": "https://prod.cdn.publicnext.com/s3fs-public/41912020250115073335filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು:- ತಾಲ್ಲೂಕಿನ ಬೀಕನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ನೊಂದ ನೌಕರರಿಗೆ ಉದ್ಯೋ...Read more" } ", "keywords": "Node,Chikmagalur,Government,Education", "url": "https://publicnext.com/node" }
ಚಿಕ್ಕಮಗಳೂರು:- ತಾಲ್ಲೂಕಿನ ಬೀಕನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲರ ವಿರುದ್ಧ ಶಿಸ್ತು
ಕ್ರಮ ಕೈಗೊಂಡು ನೊಂದ ನೌಕರರಿಗೆ ಉದ್ಯೋಗ ಮರಳಿ
ಒದಗಿಸಿಕೊಡಬೇಕು ಎಂದು ದಸಂಸ ಮುಖಂಡರುಗಳು
ಇಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಲತಿ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಶಾಲೆಯ ಡಿ.ಗ್ರೂಪ್ ನೌಕರರ ದೂರಿನ ಮೇರೆಗೆ ಶಾಲೆಗೆ ಭೇಟಿ ನೀಡಿದ್ದು ಪ್ರಾಂಶುಪಾಲರ ಜೊತೆ ಚರ್ಚಿಸುವಾಗ ಶಾಲೆಯ ಇಬ್ಬರು ಸಿಬ್ಬಂದಿಗಳು, ಡಿ.ಗ್ರೂಪ್ ಮಹಿಳಾ ನೌಕರೆ ಹಾಗೂ ಆಕೆಯ ಗಂಡನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು ಪ್ರಾಂಶುಪಾಲರು ಮೂಕಪ್ರೇಕ್ಷಕರಂತೆ ವರ್ತಿಸಿದ್ದಾರೆ ಎಂದು ದೂರಿದರು.
ಈ ಹಿಂದೆಯು ದಸಂಸ ಪದಾಧಿಕಾರಿಗಳು ಮೊರಾರ್ಜಿ ಶಾಲೆಯ ಇಬ್ಬರು ಸಿಬ್ಬಂದಿಗಳ ಅನೈತಿಕ ಸಂಬಂಧದ ಬಗ್ಗೆ ದೂರು ನೀಡಲಾಗಿತ್ತು. ಅಲ್ಲದೇ ಸಿಬ್ಬಂದಿಗಳನ್ನು ಬೇರೆಡೆ ವರ್ಗಾಯಿಸಲು ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಶಾಲೆಗೆ ತೆರಳಿದ ಸಮಿತಿಯವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಲಾಗಿದೆ ಎಂದರು. ಈ ಎಲ್ಲಾ ಪ್ರಕರಣದ ಹಿಂದೆ ಮೊರಾರ್ಜಿ ಶಾಲೆಯ ಪ್ರಾಂಶುಪಾಲರ ಕೈವಾಡವಿರುವ ಕಾರಣ ಡಿ. ಗ್ರೂಪ್ ನೌಕರೆಯನ್ನು ಬಲವಂತದಿಂದ ತಿಂಗಳುಗಟ್ಟಲೇ ರಜೆಗೆ ಕಳುಹಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತು. ರಜೆಯ ನಂತರ ಡಿ.ಗ್ರೂಪ್ ನೌಕರೆ ಉದ್ಯೋಗಕ್ಕೆ ಮರಳಿದ ವೇಳೆ ಸೇರ್ಪಡೆಗೊಳಿಸದೇ ಪ್ರಾಂಶುಪಾಲರು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ತಿಳಿಸಿದರು ಕೂಡಲೇ ಪ್ರಾಂಶುಪಾಲರನ್ನು ಸೇವೆಯಿಂದ ವಜಾಮಾಡಬೇಕು. ವಿಳಂಬ ಧೋರಣೆ ಅನುಸರಿಸಿದರೆ ಇಲಾಖೆ ಕಚೇರಿ ಮುಂದೆ ನ್ಯಾಯದೊರೆಯುವತನಕ ಅಹೋರಾತ್ರಿ ಧರಣಿ ಹಮ್ಮಿಕೊಳ್ಳ
ಬೇಕಾಗುತ್ತದೆ ಎಂದು ಎಚ್ಚರಿಸಿದರು
Kshetra Samachara
15/01/2025 07:40 pm