ಚಿತ್ರದುರ್ಗ: ಬಾಲೇನಹಳ್ಳಿಯ ವಸತಿ ಶಾಲೆಯ ಮುಂಭಾಗದ ಮುಖ್ಯರಸ್ತೆಯಲ್ಲಿ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿಯ ವಸತಿ ಶಾಲೆಯ ಸಮೀಪ ಟಿಪ್ಪರ್- ಇನೋವಾ ಮತ್ತು ಒಮ್ನಿ ಕಾರು ನಡುವೆ ಸರಣಿ ಅಪಘಾತ ಸಂಭವಿಸಿದೆ.
ಚಳ್ಳಕೆರೆ ಕಡೆಯಿಂದ ಚಿತ್ರದುರ್ಗ ಮಾರ್ಗವಾಗಿ ತೆರಳುತ್ತಿದ್ದ ಟಿಪ್ಪರ್, ಓಮ್ನಿ- ಇನೋವಕ್ಕೆ ಡಿಕ್ಕಿ ಹೊಡೆದಿದೆ. ಓಮ್ನಿ ಹಾಗೂ ಇನೋವಾ ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಅತಿ ವೇಗದಲ್ಲಿದ್ದ ಟಿಪ್ಪರ್ ಲಾರಿ ಪಲ್ಟಿ ಹೊಡೆದಿದೆ.
ಓಮ್ನಿ ಹಾಗೂ ಇನೋವಾ ಕಾರಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
PublicNext
15/01/2025 07:26 pm