ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಶ್ವತ ಸುಖ ಪಡೆಯಲು ಪುಣ್ಯಕಾರ್ಯ ಮಾಡಿ: ಸಂತೋಷ ಹಿರೇಮಠ

ಬೈಲಹೊಂಗಲ: ಮನುಷ್ಯ ಶಾಶ್ವತ ಸುಖವನ್ನು ಪಡೆಯಲು ಪುಣ್ಯಕಾರ್ಯಗಳನ್ನು ಮಾಡುತ್ತಿರಬೇಕು. ನಿತ್ಯ ಒತ್ತಡದ ಬದುಕಿನ ತಳಲಾಟದಲ್ಲಿ ಚಿಂತೆ ಆವರಿಸಿದ್ದು, ಭಗವಂತನ ನಾಮಸ್ಮರಣೆಯಿಂದ ನೆಮ್ಮದಿ ಲಭಿಸುತ್ತದೆ ಎಂದು ಪಂಚವಟಿ ಮುಖ್ಯ ವ್ಯವಸ್ಥಾಪಕ ಸಂತೋಷ ಹಿರೇಮಠ ಹೇಳಿದರು.

ಸಮೀಪದ ಸೊಗಲ ರಸ್ತೆ ಪಕ್ಕದ ಪಂಚವಟಿ ಮಹಾಂತ ಶಿವಯೋಗೀಶ್ವರ ಕಲ್ಯಾಣ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಸತತ ಆರು ದಿನಗಳ ಕಾಲ ಆಯೋಜಿಸಿದ್ದ ಪ್ರವಚನ ಹಾಗೂ ಧಾರ್ಮಿಕ, ನಾನಾ ಕಾರ್ಯಕ್ರಮದ ಸಮಾರೋಪ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಅಭ್ಯಂಗ ಸ್ನಾನ, ಗಣ್ಯರ ಸನ್ಮಾನ, ಸಂಕ್ರಾಂತಿ ಸಂಭ್ರಮ ಸಾಸ್ಕøತಿಕ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಚಿಕ್ಕೋಡಿ ಶ್ರೀ ಸಂಪಾದನಾ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಸಭೆ ಸಮಾರಂಭಗಳಿಂದ ಗ್ರಾಮದಲ್ಲಿ ನೆಮ್ಮದಿ, ಸೌಹಾರ್ದತೆ, ಭಾವೈಕ್ಯತೆ ಬೆಳೆಯಲು ಸಾಧ್ಯ. ಸಂಕಷ್ಟದ ಸಮಯದಲ್ಲಿ ಶಿವನ ಆರಾಧನೆ ಆಸರೆಯಾಗಬಲ್ಲದು ಎಂದರು.

ಮುರಗೋಡ ಶ್ರೀ ಮಹಾಂತ ದುರದುಂಡೀಶ್ವರ ಮಠದ ಶ್ರೀ ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಘಟಪ್ರಭಾ ಶ್ರೀಗಳು, ರಾಮದುರ್ಗ ಶ್ರೀಗಳು, ಉಪ್ಪಿನ ಬೆಟಗೇರಿ ಶ್ರೀಗಳು, ಹೊಸಳ್ಳಿ ಶ್ರೀಗಳು, ದೇವರಶೀಗಿಹಳ್ಳಿ ಶ್ರೀಗಳು ಮಾತನಾಡಿದರು.

ಧರ್ಮದರ್ಶಿ ಅಶೋಕ ಶೆಟ್ಟರ, ವೀರಭದ್ರಪ್ಪ ದೇಸಾಯಿ, ಬಸಯ್ಯಸ್ವಾಮಿ ಶಿವಪ್ಪಯ್ಯನವರಮಠ, ಜಯಶ್ರೀ ಮಲ್ಲಯ್ಯನವರಮಠ, ಗ್ರಾ.ಪಂ. ಅಧ್ಯಕ್ಷೆ ಕವಿತಾ ಪಾಟೀಲ, ಪ್ರೇಮಾ ಅಂಗಡಿ, ಪಾರ್ವತಿ ಹುಲೆಪ್ಪನವರಮಠ, ಎಚ್. ಶಿವಪ್ರಸಾದ ಶ್ವೇತಾ ತಿಪ್ಪಿಮಠ ಮತ್ತಿತರರು ಇದ್ದರು.

ಕುಮಾರ ಪೂಜಾರ ಸ್ವಾಗತಿಸಿದರು. ಬಸವರಾಜ ಬ್ಯಾಳಿ ನಿರೂಪಿಸಿದರು. ಎಂ.ವಿ. ಉಪ್ಪಿನ ವಂದಿಸಿದರು.

Edited By : PublicNext Desk
Kshetra Samachara

Kshetra Samachara

15/01/2025 05:33 pm

Cinque Terre

5.36 K

Cinque Terre

0

ಸಂಬಂಧಿತ ಸುದ್ದಿ