ಬೈಲಹೊಂಗಲ: ಜಗತ್ತಿನಲ್ಲಿ ದೇವಿ ಸ್ವರೂಪಿ ಗೋವಿಗೆ ಪವಿತ್ರ, ಮಹತ್ತರ ಸ್ಥಾಮಾನವಿದ್ದು, ಯಾವ ಕಾರಣಕ್ಕೂ ಹಿಂಸಿಸದೆ ಅದನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಿದರೆ ಸಂತಸ ಸಮಾಧಾನದ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಮುರಗೋಡ ಶ್ರೀ ಮಹಾಂತ ದುರದುಂಡಿಶ್ವರ ಮಠದ ಪೀಠಾಧಿಕಾರಿ ಶ್ರೀ ನೀಲಕಂಠ ಮಹಾ ಸ್ವಾಮೀಜಿ ಹೇಳಿದರು.
ಸಮೀಪದ ಸೊಗಲ ರಸ್ತೆ ಪಕ್ಕದ ಪಂಚವಟಿ ಮಹಾಂತ ಶಿವಯೋಗೀಶ್ವರ ಕಲ್ಯಾಣ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ರೈತ-ಕೃಷಿ ವಿಚಾರ ಸಂಕೀರ್ಣ ಗೋಷ್ಠಿ ಹಾಗೂ ಗೋ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಡಸೋಸಿ ಶ್ರೀ ಜಗದ್ಗು ಪಂಚಮ ಶಿವಲಿಂಗ ಸ್ವಾಮೀಜಿ ಮಾತನಾಡಿ, ಆಧುನಿಕತೆ, ಹೆಚ್ಚು ಹೆಚ್ಚು ಬೆಳೆ ತೆಗೆಯುವ ನೆಪದಲ್ಲಿ ಪ್ರಕೃತಿ ಮೇಲೆ ನಿರಂತರ ದಮನ ಒಂದು ಕಡೆಯಾದರೆ, ವಿಷಯುಕ್ತ ಆಹಾರ ಉತ್ಪನ್ನವೇ ಸಾಧನೆ ಎನ್ನುವಂತಾಗಿದೆ. ಪ್ರಕೃತಿಯೂ ಉಳಿಯಬೇಕು, ರೈತನೂ ಸ್ವಾವಲಂಬಿಯಾಗಬೇಕು. ಕೃಷಿಕರನ್ನು ಪಾರಂಪರಿಕ ಕೃಷಿ ಪದ್ದತಿಯೆಡೆಗೆ ಕರೆದೊಯ್ಯಬೇಕಿದೆ ಎಂದರು.
ಘಟಪ್ರಭಾ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಕುಮಾರ ಶ್ರೀಗಳು, ಮುನವಳ್ಳಿ ಶ್ರೀಗಳು, ಚಿಮ್ಮಡ ಶ್ರೀಗಳು, ಹುಕ್ಕೇರಿ ಶ್ರೀಗಳು ಮಾತನಾಡಿದರು.
ಮೈಸೂರು ಬೇಬಿ ಗ್ರಾಮ ಶ್ರೀಗಳು, ನವಲಗುಂದ ಶ್ರೀಗಳು, ಹತ್ತರಕಿ ಶ್ರೀಗಳು, ಬೈಲವಾಡ ಶ್ರೀಗಳು, ದೊಡವಾಡ ಶ್ರೀಗಳು, ಶ್ರೀಕ್ಷೇತ್ರ ಸೊಗಲ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಪಂಚವಟಿ ಮುಖ್ಯ ವ್ಯವಸ್ಥಾಪಕ ಸಂತೋಷ ಹಿರೇಮಠ, ಧರ್ಮದರ್ಶಿ ಅಶೋಕ ಶೆಟ್ಟರ, ವಿ.ಬಿ. ದೇಸಾಯಿ, ಬಸಯ್ಯಸ್ವಾಮಿ ಶಿವಪ್ಪಯ್ಯನವರಮಠ, ಜಯಶ್ರೀ ಮಲ್ಲಯ್ಯನವರಮಠ, ಗ್ರಾ.ಪಂ. ಅಧ್ಯಕ್ಷೆ ಕವಿತಾ ಪಾಟೀಲ, ಪಿಡಿಒ ವಿ.ಬಿ. ಅಂಗಡಿ, ಪ್ರೇಮಾ ಅಂಗಡಿ, ವೀಣಾ ಕವಟಗಿಮಠ, ಪಾರ್ವತಿ ಹುಲೆಪ್ಪನವರಮಠ, ಶ್ವೇತಾ ತಿಪ್ಪಿಮಠ, ಈರಣ್ಣ ಚಿಕ್ಕಮಠ ಸೇರಿದಂತೆ ನಾನಾ ಶ್ರೀಗಳು, ಗಣ್ಯರು ಉಪಸ್ಥಿತರಿದ್ದರು. ಬಿ.ಎನ್. ಬ್ಯಾಳಿ ಸ್ವಾಗತಿಸಿದರು. ಕುಮಾರ ಪೂಜಾರ ನಿರೂಪಿಸಿದರು. ಎಸ್.ವಿ. ಕಂಠಿ ವಂದಿಸಿದರು.
PublicNext
15/01/2025 09:42 am