ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಬಾಗ: ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯಾರಾಧನೆ- ವಿಶೇಷ ಕಾರ್ಯಕ್ರಮ ಸರಮಾಲೆ

ರಾಯಬಾಗ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಶ್ರೀ ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಅತೀ ವಿಜೃಂಭಣೆಯಿಂದ ಜರುಗುತ್ತಿದೆ.

ಜನವರಿ 13ರಂದು ಶ್ರೀ ಯಲ್ಲಾಲಿಂಗ ಮಹಾರಾಜರ ಬೆಳ್ಳಿ ತೊಟ್ಟಿಲು ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿರುವ ಶ್ರೀ ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜನವರಿ 27ರಂದು ಮಂಗಳವಾಗಲಿದೆ.

ಪ್ರತಿನಿತ್ಯ ಶ್ರೀಮಠದ ಅಂಗಳದಲ್ಲಿ ಗುಡ್ಡಾಪುರದ ಶಿವಶರಣೆ ದಾನಮ್ಮ ದೇವಿಯ ಪುರಾಣ ಹಾಗೂ ಪೂಜ್ಯರ ಆಶೀರ್ವಚನ ನಡೆಯಲಿದೆ. ವಿಶೇಷವಾಗಿ ದಿನಾಂಕ 17ರಂದು ಸಾಯಂಕಾಲ 6 ಗಂಟೆಗೆ ಶ್ರೀ ಮಠದ ಅಂಗಳದಲ್ಲಿ ಹತ್ತು ಸಾವಿರ ಮಾತೆಯರಿಂದ ಮುಗಳಖೋಡ ಗುರು ಪರಂಪರೆಗೆ ತನುವಿನಾರತಿ ಕಾರ್ಯಕ್ರಮ ವೈಶಿಷ್ಟಪೂರ್ಣವಾಗಿ ನೆರವೇರಲಿದೆ.

26 ರಂದು ಕೋಳಿಗುಡ್ಡ ಶ್ರೀಕ್ಷೇತ್ರದಿಂದ ಮುಗಳಖೋಡದವರೆಗೆ ಪಲ್ಲಕ್ಕಿ ಉತ್ಸವ ಹಾಗೂ 5 ರಾಜ್ಯದ ಭಕ್ತರಿಂದ ಪಾದಯಾತ್ರೆ ಕಾರ್ಯಕ್ರಮ ನಡೆಯಲಿದೆ.

ಅಲ್ಲದೆ, ಪ್ರತಿನಿತ್ಯವೂ ವಿಶೇಷ ರೀತಿಯ ಕಾರ್ಯಕ್ರಮಗಳು ಈ ಭವ್ಯವೇದಿಕೆಯಲ್ಲಿ ಜರುಗಲಿವೆ ಎಂದು ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ಭಕ್ತರೊಂದಿಗೆ ತಮ್ಮ ಅಭಿಮತವನ್ನು ಹಂಚಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಸಂತಾನ ಭಾಗ್ಯಕ್ಕಾಗಿ ಗುರುವಿನ ಸನ್ನಿಧಿಗೆ ಬಂದಿದ್ದ ಹಲವಾರು ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಅಕ್ಷತಾರೋಹಣ ಮಾಡಿದ

ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ವರ್ಷಾವಧಿಯಲ್ಲಿ ನಿಮ್ಮ ಬಾಳು ನಂದನವನವಾಗಲಿ ಎಂದು ಹೃದಯ ತುಂಬಿ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಪ್ಪಾಜಿ ಕಲಾ ಬಳಗದ ಸಂಗೀತ ನೆರೆದ ಪ್ರೇಕ್ಷಕರ ಮನವನ್ನು ತಣಿಸಿತು. ಭಕ್ತರಿಂದ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ಕಾರ್ಯಕ್ರಮದ ನಿರೂಪಣೆಯನ್ನು ನ್ಯಾಯವಾದಿ ಸೋಮು ಹೊರಟ್ಟಿಯವರು ನೆರವೇರಿಸಿದರು.

ವರದಿ : ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್, ರಾಯಬಾಗ

Edited By : Vinayak Patil
PublicNext

PublicNext

14/01/2025 08:46 pm

Cinque Terre

30.83 K

Cinque Terre

0