ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಶುದ್ಧ ಹೃದಯದಿಂದ ಮಾತ್ರ ಶ್ರೇಷ್ಠ ಸಾಹಿತ್ಯ ಹೊರಹೊಮ್ಮುತ್ತದೆ: ಈಶ್ವರ ಹೋಟಿ

ಬೈಲಹೊಂಗಲ: ಪರಿಶುದ್ಧ ಹೃದಯದಿಂದ ಮಾತ್ರ ಶ್ರೇಷ್ಠ ಸಾಹಿತ್ಯ ಹೊರಹೊಮ್ಮುತ್ತದೆ ಶಿಕ್ಷಣ ತಜ್ಞ ಈಶ್ಚರ ಹೋಟಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಮಕರ ಸಂಕ್ರಾಂತಿ ನಿಮಿತ್ತವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಶಹಾಬುದ್ದೀನ್ ಕಾಲೇಖಾನ್ ಅವರ ‘ಕಾವ್ಯಸ್ಪೂರ್ತಿ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ, ಕಲೆ ಬದುಕಿನ ಆನಂದವನ್ನು ಇಮ್ಮಡಿಗೊಳಿಸುವ, ಮನಸ್ಸಿಗೆ ಆನಂದ ನೀಡುವ ಶಕ್ತಿ ಹೊಂದಿದೆ ಎಂದರು.

ಧಾರವಾಡದ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಪಿ. ಮಹಾದೇವ ನಾಯ್ಕ ಶಹಾಬುದ್ದೀನ್ ಕಾಲೇಖಾನ್ ಅವರ ‘ಕಾವ್ಯಸ್ಪೂರ್ತಿ’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿ ಯುವ ಕವಿಗಳು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ ಎಂದು ಶುಭ ಹಾರೈಸಿದರು.

ಯರಗಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಕೃತಿ ಪರಿಚಯಿಸಿದರು. ಪ್ರಕೃತಿ, ಹಬ್ಬಗಳು, ಶಿಕ್ಷಣ, ಪ್ರೀತಿ ಮುಂತಾದ ವಿಷಯಗಳ ಕುರಿತಾದ ಕವನಗಳು ಚೊಚ್ಚಲ ಕೃತಿಯ ಮೌಲ್ಯ ಹೆಚ್ಚಿಸಿದ್ದು ಕವಿಯ ಎದೆಯೊಳಗೆ ಭಾವನೆಗಳು ಕುಸುಮಗಳಾಗಿ ಅರಳಿವೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಪ್ರಸ್ತಾವಿಕ ನುಡಿಗನ್ನಾಡಿದ ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರಾದ ಮೋಹನ ಪಾಟೀಲ  ಎಲ್ಲ ಕವಿಗಳಿಗೆ ಕಿತ್ತೂರು ಕರ್ನಾಟಕದ ಬೈಲಹೊಂಗಲ ನೆಲದ ಹಿರಿಮೆ ಗರಿಮೆಯನ್ನು ಪರಿಚಯ ಮಾಡಿಕೊಟ್ಟರು. ಕವಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ಮುಖ್ಯವಾಹಿನಿಗೆ ತರುವುದಲ್ಲದೇ ಕೃತಿಗಳನ್ನು ಹೊರತರಲು ಪ್ರೇರಣೆ ನೀಡುವುದು ಕವಿಗೋಷ್ಠಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಕಲಬುರಗಿಯ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಫಾರೂಕಅಹ್ಮದ ಮಣೂರ್  ಮಾತನಾಡಿ ಸಾಮಾಜಿಕ ಸೇವೆ ಮನಸ್ಸಿಗೆ ತೃಪ್ತಿ ಕೊಡುವುದಲ್ಲದೆ ಬದುಕಿನ ಸಂಭ್ರಮ ಹೆಚ್ಚಿಸುತ್ತದೆ ಎಂದರು. ಎಲ್ಲ ವಿಷಯಗಳ ಬಗ್ಗೆ ಕವನ ವಾಚಿಸಿದ್ದು ಖುಷಿ ನೀಡಿತು ಕಲಬುರಗಿಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಹುಬ್ಬಳ್ಳಿಯ ಉಪ ಕಾರಾಗೃಹದ ಅಧೀಕ್ಷಕರಾದ ಶಹಾಬುದ್ದೀನ್ ಕಾಲೇಖಾನ್ ಮಾತನಾಡಿ ವೃತ್ತಿಯ ಜೊತೆಗೆ ಸಾಹಿತ್ಯ ರಚನೆ ಪ್ರವೃತ್ತಿಯಾದಾಗ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದರು. ಭಾವ ಪ್ರಪಂಚದಲ್ಲಿ ಮನಸ್ಸು ಪ್ರಶಾಂತವಾಗಿರಬಲ್ಲದು ಎಂದು ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್.ಠಕ್ಕಾಯಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ಶಾಹೀನ್ ಅಖ್ತರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ ಕೋಳಿ, ಬಸವಂತಪ್ಪ ಗಡದವರ ನಿರೂಪಿಸಿದರು. ಕವಿ ಕವಿಯತ್ರಿಯರು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

14/01/2025 04:52 pm

Cinque Terre

28.18 K

Cinque Terre

0

ಸಂಬಂಧಿತ ಸುದ್ದಿ