", "articleSection": "Cultural Activity,Public News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1736935880-a14~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UpparChikkodi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕೋಡಿ: ಲೋಕ ಕಲ್ಯಾಣಕ್ಕಾಗಿ ಹಾಗೂ ಭಕ್ತರ ಪಾಪಗಳು ನಿವಾರಣೆಯಾಗಿ ಸಕಲ ಸುಖ ಪ್ರಾಪ್ತಿಯಾಗಲೆಂದು ಶ್ರೀಶೈಲ್ ಜಗದ್ಗುರು ಡಾ!ಚನ್ನಸಿದ್ದರಾಮ ಪಂಡಿ...Read more" } ", "keywords": ",Belgaum,Cultural-Activity,Public-News,Religion", "url": "https://publicnext.com/node" } ಚಿಕ್ಕೋಡಿ: ಮಕರ ಸಂಕ್ರಮಣ ಹಿನ್ನೆಲೆ - ಲೋಕ ಕಲ್ಯಾಣಕ್ಕಾಗಿ ಶ್ರೀಶೈಲ ಜಗದ್ಗುರುಗಳಿಂದ ಕೃಷ್ಣಾ ನದಿಯ ಪುಣ್ಯ ಸ್ನಾನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಮಕರ ಸಂಕ್ರಮಣ ಹಿನ್ನೆಲೆ - ಲೋಕ ಕಲ್ಯಾಣಕ್ಕಾಗಿ ಶ್ರೀಶೈಲ ಜಗದ್ಗುರುಗಳಿಂದ ಕೃಷ್ಣಾ ನದಿಯ ಪುಣ್ಯ ಸ್ನಾನ

ಚಿಕ್ಕೋಡಿ: ಲೋಕ ಕಲ್ಯಾಣಕ್ಕಾಗಿ ಹಾಗೂ ಭಕ್ತರ ಪಾಪಗಳು ನಿವಾರಣೆಯಾಗಿ ಸಕಲ ಸುಖ ಪ್ರಾಪ್ತಿಯಾಗಲೆಂದು ಶ್ರೀಶೈಲ್ ಜಗದ್ಗುರು ಡಾ!ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಸಕಲ ಭಕ್ತಾದಿಗಳೊಂದಿಗೆ ಪುಣ್ಯಸ್ಥಾನ ಜರುಗಿತು.

ಇಂದು ಸಂಕ್ರಾತಿ ದಿನದಂದು ಸೂರ್ಯನೂ ದಕ್ಷಿಣದಿಂದ-ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸುವ ಶುಭದಿನ. ಭಕ್ತರು ಸಂಕ್ರಾಂತಿ ದಿನದಂದು ಪುಣ್ಯಕ್ಷೇತ್ರಗಳ ನದಿಯ ತೀರದಲ್ಲಿ ಜದ್ಗುರುಗಳ ಪಾದದಿಂದ ನೀರು ಹಾಕಿಕೊಳ್ಳುವುದರಿಂದ ಭಕ್ತರ ಸಕಲ ತೊಂದರೆಗಳು ನಿವಾರಣೆಯಾಗಿ, ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಲೋಕಕಲ್ಯಾಣಕ್ಕಾಗಿ ಶ್ರೀಶೈಲ್ ಜದ್ಗುರುಗಳ ಲೋಕಕಲ್ಯಾಣಕ್ಕಾಗಿ ಕೃಷ್ಣಾನದಿಯ ತೀರದಲ್ಲಿ ಪುಣ್ಯ ಜರುಗಿತು ಹಾಗೂ ಸುಮಾರು 2 ಸಾವಿರ ಭಕ್ತರು ಕೃಷ್ಣಾನದಿಯಲ್ಲಿ ಸ್ನಾನಮಾಡಿ ಪಾವನರಾದರು. ಬಳಿಕ ಭಕ್ತರ ಉದ್ಧಾರಕ್ಕಾಗಿ ಶ್ರೀಶೈಲ್ ಜದ್ಗುರುಗಳ ಸಾನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂಧರ್ಭದಲ್ಲಿಅಂಬಿಕಾನಗರದ ಶ್ರೀಗಳು, ಶ್ರೀಕಾಂತ ಉಮರಾಣಿ, ಶಿವಾನಂದ ಹಂಜಿ, ಪ್ರಕಾಶ ಮಿರ್ಜೆ, ರವಿ ಮಿರ್ಜೆ, ಸುಭಾಷ ಮಿರ್ಜೆ, ಶಿವಗೌಡ ಪಾಟೀಲ, ತಿಪ್ಪಣ್ಣ ಪಾಟೀಲ್, ಕುಮಾರ ಪಾಟೀಲ್, ಮಹೇಶ ಮಿರ್ಜೆ, ಕಲಗೌಡ ಪಾಟೀಲ, ಪುಟ್ಟಣ ಪಾಟೀಲ, ಪ್ರಕಾಶ ಪಾಟೀಲ, ನರಸು ಪಾಟೀಲ, ರಾಯಪ್ಪ ಕಮತೆ,ರಾವಸಾಹೇಬ ಮಗದುಮ್ಮ, ಸುನೀಲ ಮಹಾರಾಜ, ತೇಜಗೌಡ ಪಾಟೀಲ, ಮಚೇಂದ್ರ ಕಮತೆ, ರಾಮಗೌಡ ಪಾಟೀಲ ಗವಾನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : Suman K
Kshetra Samachara

Kshetra Samachara

15/01/2025 03:41 pm

Cinque Terre

6.46 K

Cinque Terre

0