ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಚಿವೆ ಹೆಬ್ಬಾಳ್ಕರ್ ಕಾರು ಅಪಘಾತ ಆಘಾತ ತಂದಿದೆ - ವಚನಾನಂದ ಶ್ರೀ

ಬೆಳಗಾವಿ: ನಮ್ಮ ಸಮುದಾಯ, ನಾಡಿನ ಪ್ರತಿಭಾವಂತ ಜನಪ್ರಿಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕಾರು ಅಪಘಾತದಲ್ಲಿ ಗಾಯವಾಗಿದ್ದು ನಮೆಗೆಲ್ಲ ಬಹಳ ಆಘಾತ ತಂದಿದೆ ಎಂದು ಹಾವೇರಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಹರ ಜಾತ್ರೆಯಲ್ಲಿ ಇರೋದ್ರಿಂದ ತಡವಾಗಿ ಮಾಹಿತಿ ಬಂತು. ಇವತ್ತು ಬೆಳಗ್ಗೆ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಸಚಿವೆ ಹೆಬ್ಬಾಳ್ಕರ್ ಬಹಳ ಆರೋಗ್ಯವಾಗಿದ್ದಾರೆ. ಅವರ ಜತೆಗೆ ಹತ್ತಾರ ನಿಮಿಷ ಮಾತನಾಡಿರುವೆ. ಅವರ ಧೈರ್ಯ, ಸ್ಥೈರ್ಯವನ್ನು ಮೆಚ್ಚಲೇಬೇಕು. ಅವರಲ್ಲಿ ಮುಖದಲ್ಲಿ ಯಾವುದೇ ರೀತಿಯ ಅಪಘಾತದ ಭಾವನೆಗಳು ಇಲ್ಲ. ಅವರಲ್ಲಿ ಅದಮ್ಯ ಧೀಮಂತ ಶಕ್ತಿ ಇದೆ. ಬೇಗೆ ಗುಣಮುಖವಾಗಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುವೆ. ಅವರು ಆದಷ್ಟು ಬೇಗ ಜನಸೇವೆಯಲ್ಲಿ ಕ್ರೀಯಾಶೀಲವಾಗಲಿ ಎಂದರು.

ಅಪಘಾತ ನಮಗೆ ಬಹಳ ಖೇದ ಆಗಿದೆ, ಅವರಿಗೆ ಬೇಕಿರೋದು ಚಿಕಿತ್ಸೆಯಲ್ಲ ,ರೆಸ್ಟ್ ಬೇಕಿದೆ. ಹರ ಮತ್ತು ಚೆನ್ನಮ್ಮನ ಆಶೀರ್ವಾದದಿಂದ ಹೆಬ್ಬಾಳಕರ್ ಗಂಭೀರ ಗಾಯವಾಗಿಲ್ಲ. ಹೆಬ್ಬಾಳ್ಕರ್ ಅವರು ಒಂದು ತಿಂಗಳು ಸರಿಯಾದ ಬೆಡ್ ರೆಸ್ಟ್‌ ಬೇಕು ಎಂದು ವಚನಾನಂದ ಸ್ವಾಮೀಜಿ ಹೇಳಿದರು.

Edited By : Suman K
Kshetra Samachara

Kshetra Samachara

15/01/2025 02:45 pm

Cinque Terre

5.28 K

Cinque Terre

0

ಸಂಬಂಧಿತ ಸುದ್ದಿ