ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್…!

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಎದುರಿಗೆ ಬಂದ ನಾಯಿ ಜೀವ ಉಳಿಸಲು ಹೋಗಿ ಅಪಘಾತ ಆಗಿಲ್ಲ, ಬದಲಾಗಿ ಕಾರು ಅಪಘಾತಕ್ಕೆ ಕ್ಯಾಂಟರ್ ಅಡ್ಡ ಬಂದಿದ್ದೇ ಕಾರಣ ಎಂದು ಬೆಳಕಿಗೆ ಬಂದಿದೆ.‌

ಕಿತ್ತೂರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್‌ನಲ್ಲಿ ಕಾರು ಅಪಘಾತಕ್ಕೆ ಕ್ಯಾಂಟರ್ ಅಡ್ಡ ಬಂದಿದ್ದೇ ಕಾರಣ ಎಂದು ಉಲ್ಲೇಖ ಮಾಡಲಾಗಿದೆ. ನಿನ್ನೆ ಬೆಳಗ್ಗೆ ನಾಯಿ ಜೀವ ಉಳಿಸಲು ಹೋಗಿ ಅಪಘಾತ ಆಗಿದೆ ಎಂದು ಮೃಣಾಲ್‌ ಹೆಬ್ಬಾಳ್ಕರ್, ಚನ್ನರಾಜ್ ಹಟ್ಟಿಹೊಳಿ, ಎಸ್ಪಿ ಡಾ. ಭೀಮಾಶಂಕರ ಗುಳೇದ್ ಈ ರೀತಿ ಪ್ರತಿಕ್ರಿಯೆ ನೀಡಿದರು. ಆದರೆ ಸ್ಥಳ, ವಾಹನ ಪರಿಶೀಲನೆ ಬಳಿಕ ಕ್ಯಾಂಟರ್ ತಾಗಿ ಅಪಘಾತ ಆಗಿದೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಿತ್ತೂರು ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕ್ಯಾಂಟರ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.‌ ಯಾವುದೇ ಮುನ್ಸೂಚನೆ ಇಲ್ಲದೇ ಕಂಟೇನರ್ ಚಾಲಕ ಎಡಕ್ಕೆ ಬಂದು ಹೆಬ್ಬಾಳ್ಕರ್ ವಾಹನಕ್ಕೆ ಡಿಕ್ಕಿ ಆಗಿದೆ.‌ ಅಪಘಾತ ತಪ್ಪಿಸಲು ಹೋಗಿ ಹೆಬ್ಬಾಳಕರ್ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಆಗಿದೆ. ಕಾರು ಚಾಲಕ ಶಿವಪ್ರಸಾದ್ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ.

Edited By : Somashekar
PublicNext

PublicNext

15/01/2025 01:34 pm

Cinque Terre

25.43 K

Cinque Terre

2

ಸಂಬಂಧಿತ ಸುದ್ದಿ