ಬೆಳಗಾವಿ: ನಿನ್ನೆ ಬೆಳ್ಳಂಬೆಳಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಹ ಚಿಕಿತ್ಸೆ ಮುಂದುವರಿದಿದೆ.
ಕತ್ತು ಹಾಗೂ ಬೆನ್ನಿನ ಮೂಳೆಯ L2, L4 ಗೆ ಫ್ಯಾಕ್ಚರ್ ಹಿನ್ನೆಲೆ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಇಡೀ ದಿನ ಲಕ್ಷ್ಮಿ ಹೆಬ್ಬಾಳಕರ್ ಅವರು ಕೇವಲ ಜ್ಯೂಸ್ ಸೇವನೆ ಮಾಡಿದ್ದಾರೆ. ಅಪಘಾತದ ಬಳಿಕ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಜೊತೆಗೆ ಡ್ರೈವರ್ ಹಾಗೂ ಗನ್ ಮ್ಯಾನ್ ಕೂಡಾ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಇನ್ನೂ ಎರಡು ದಿನ ಆಸ್ಪತ್ರೆಯಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಸ್ಪತ್ರೆಯಲ್ಲಿ ಇರಲಿದ್ದು, ಇಂದು ಮತ್ತೊಮ್ಮೆ ವೈದ್ಯರಿಂದ ತಪಾಸಣೆ ಬಳಿಕ ಡಿಸ್ಚಾರ್ಚ್ ಬಗ್ಗೆ ವೈದ್ಯರು ನಿರ್ಧಾರ ಮಾಡಲಿದ್ದಾರೆ.
PublicNext
15/01/2025 02:45 pm