ರಾಯಬಾಗ : ಪಟ್ಟಣದ ತುಂಬೆಲ್ಲ ಹಂದಿಗಳ ಅವಾಂತರ ಹೇಳತೀರದು. ಪಟ್ಟಣದ 7 ವಾರ್ಡ್ ಗಳಲ್ಲಿ ಮನುಷ್ಯರು ವಾಸಿಸಲು ಯೋಗ್ಯವಲ್ಲದ ವಾತಾವರಣ ನಿರ್ಮಾಣವಾಗಿದೆ. ಕಾರಣ ಇಲ್ಲಿಯ ಜನರು ಕಳೆದ ಹಲವಾರು ತಿಂಗಳುಗಳಿಂದ ವಿಪರೀತವಾಗಿರುವ ಹಂದಿಯ ಹಾವಳಿಗೆ ಬೇಸತ್ತು ಹೋಗಿದ್ದಾರೆ.
ಹಾಗಂತ ಇದು ನಿನ್ನೆ ಮೊನ್ನೆಯ ವಿಚಾರವಲ್ಲ. ಬರೋಬ್ಬರಿ ಒಂದು ವರ್ಷದಿಂದ ಪಟ್ಟಣದ ತುಂಬೆಲ್ಲ ಈ ಹಂದಿಗಳ ಕಾಟ ಸರ್ವೇ ಸಾಮಾನ್ಯವಾಗಿ ಹೋಗಿದೆ. ಈ ಕುರಿತು ಎಷ್ಟೋ ತಿಂಗಳುಗಳಿಂದ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ಹಾಗೂ ಹಂದಿ ಮಾಲೀಕನಿಗೆ ಹೇಳಿದರೂ ಸಹಾ ಇದು ಒಂದು ಸಮಸ್ಯೆಯೇ ಎನ್ನುವಂತೆ ತಮ್ಮ ಬೇಜವಾಬ್ದಾರಿತನವನ್ನು ಪ್ರದರ್ಶನ ಮಾಡುತ್ತಿರುವುದು. ಮಕ್ಕಳು ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಅಂಗಳಕ್ಕೆ ಬರುವಂತಿಲ್ಲ. ಪಾತ್ರೆ ತೊಳೆಯುವ ಮಹಿಳೆಯರು ಕೊಂಚ ಮೈ ಮರೆಯುವಂತಿಲ್ಲ. ಇಂತಹ ದುಸ್ಥಿತಿ ಪಟ್ಟಣದ ಜನರಲ್ಲಿ ಅಸಮಾಧಾನ ಉಂಟುಮಾಡಿದೆ. ಸದ್ಯ ಸರಕಾರದಿಂದ ಮನೆಗಳು ಸಹ ಮಂಜೂರಾತಿ ಇಲ್ಲದಿರುವ ಈ ಪರಿಸ್ಥಿತಿಯಲ್ಲಿ ಕೂಡಿಟ್ಟ ಹಣದಿಂದನಾದರೂ ಮನೆ ಕಟ್ಟಿಕೊಳ್ಳಬೇಕೆನ್ನುವ ಬಡವರ ಆಸೆಗೆ ಬರೆ ಎಳೆದಂತಾಗಿದೆ.
ವರದಿ : ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್, ರಾಯಬಾಗ
Kshetra Samachara
15/01/2025 02:58 pm