ಬೈಲಹೊಂಗಲ: ಅಪಘಾತ ವಿಮೆ ಕಡ್ಡಾಯವಾಗಿ ಪ್ರತಿಯೊಬ್ಬರು ಮಾಡಿಸಿಕೊಳ್ಳಬೇಕೆಂದು ತಾ ಪಂ ಯೋಜನಾಧಿಕಾರಿ ರಾಜಶೇಖರ ಕಡೆಮನಿ ಹೇಳಿದರು.
ಅವರು ಬುಧವಾರ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಲೀಡ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಹಾಗೂ ಕುಟುಂಬದ ಸದಸ್ಯರು ಈ ಅಫಘಾತ ವಿಮೆಗಳನ್ನು ಮಾಡಿಸಿಕೊಳ್ಳಬೇಕು ಹಾಗೂ ಈ ಯೋಜನೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ರೂ. 436/- ವಯಸ್ಸು (18-50) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ರೂ 20/- ವಯಸ್ಸು (18-70) ಸದುಪಯೋಗವನ್ನು ಪಡಿಸಿಕೊಳ್ಳಬೇಕು.
ಸಹಾಯಕ ಕೃಷಿ ನಿರ್ದೇಶಕರು ಬಸವರಾಜ್ ದಳವಾಯಿ ಮಾತನಾಡಿ, ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿರುವ ಫಲಾನುಭವಿಗಳು ಹಾಗೂ ರೈತ ಕುಟುಂಬಸ್ಥರು, ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು, ಹೊರಗುತ್ತಿಗೆ ನೌಕರು ಎಲ್ಲಾ ಸಿಬ್ಬಂದಿಗಳು ವಿಮೆಗಳನ್ನು ಮಾಡಿಸಿ ಕೇಂದ್ರ ಸರ್ಕಾರದ ಈ ಯೋಜನೆಯ ಸದುಪಯೋಗವನ್ನು ಎಲ್ಲಾ ನಾಗರಿಕರು ಪಡೆದುಕೊಳ್ಳುವಂತೆ ವಿವರಿಸಿದರು.
ತಾಲೂಕ ಆರೋಗ್ಯಾಧಿಕಾರಿ ಡಾ. ಎಸ್ ಎಸ್ ಸಿದ್ದಣ್ಣವರ ಮಾತನಾಡಿ, ಪ್ರತಿಯೊಂದು ಅರ್ಹ ಕುಟುಂಬಗಳು ಸರ್ಕಾರದ ಎಲ್ಲಾ ಯೋಜನೆಯ ಸಧುಪಯೋಗವನ್ನು ಪಡೆದುಕೊಳ್ಳುವುದು ಅದೇ ರೀತಿಯಲ್ಲಿ ಆಯುಷ್ಮಾನ ಭಾರತ ಯೋಜನೆಯನ್ನು ಸಹ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎನ್ ಪ್ಯಾಟಿ, ಸಹಾಯಕ ಲೆಕ್ಕಾಧಿಕಾರಿ ಪ್ರಶಾಂತ ಹಿರೇಮಠ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಪಂ ಎಲ್ಲಾ ಸಿಬ್ಬಂದಿಗಳು, ವಿವಿಧ ಬ್ಯಾಂಕ ವ್ಯವಸ್ಥಾಪಕರು, ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.
Kshetra Samachara
15/01/2025 03:01 pm