ಉಡುಪಿ: ಚಾಮರಾಜಪೇಟೆಯಲ್ಲಿ ಹಸುಗಳಿಗೆ ಹಿಂಸೆ ನೀಡಿರುವ ಘಟನೆಯ ಬಗ್ಗೆ ತಿಳಿದು ಅತ್ಯಂತ ಆಘಾತವಾಗಿದೆ. ಇದನ್ನು ಕೇವಲ ಗೋವಿನ ಹಿಂಸೆಯಾಗಿ ಪರಿಗಣಿಸುವುದಿಲ್ಲ. ಇದು ಸನಾತನ ಧರ್ಮದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಾವು ಗೋವುಗಳನ್ನು ದೇವರ ಸನ್ನಿಧಾನದಲ್ಲಿರುವ ಪವಿತ್ರ ವಸ್ತು ಎಂಬುದಾಗಿ ಪೂಜಿಸುತ್ತೇವೆ. ನಮ್ಮ ದೇಶದಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಅತ್ಯಂತ ಭಯಾನಕ ಎಂದು ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಈ ಕೃತ್ಯವನ್ನು ಮುಂದಿನ ಅಪಾಯದ ಸೂಚನೆ ಎಂದು ಭಾವಿಸುತ್ತೇನೆ. ಇದು ಅತ್ಯಂತ ಖಂಡನೀಯ. ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Kshetra Samachara
14/01/2025 12:27 pm