ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಾಸಾನಂದ ಗಿರಿ ಮಹಾರಾಜರ 'ಪಟ್ಟಾಭಿಷೇಕ'ದಲ್ಲಿ ಭಾಗಿಯಾದ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಪತ್ನಿ

ಲಕ್ನೋ: ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಅವರು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಸ್ವಾಮಿ ಕೈಲಾಶಾನಂದ ಜಿ ಮಹಾರಾಜರ ಸಮ್ಮುಖದಲ್ಲಿ ನಡೆದ ವ್ಯಾಸಾನಂದ ಗಿರಿ ಮಹಾರಾಜರ 'ಪಟ್ಟಾಭಿಷೇಕ' ಆಚರಣೆಯಲ್ಲಿ ಭಾಗವಹಿಸಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದಕ್ಕೂ ಮೊದಲು ಲಾರೆನ್ ಪೊವೆಲ್ ಅವರು ಕುಂಭಮೇಳಕ್ಕಾಗಿ ಪ್ರಯಾಗ್​ರಾಜ್​ಗೆ ತೆರಳುವ ಮೊದಲು ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಲಾರೆನ್ಸ್ ನಿರಂಜನಿ ಅಖಾರದ ಸ್ವಾಮಿ ಕೈಲಾಶಾನಂದ ಗಿರಿ ಜಿ ಮಹಾರಾಜ್ ಅವರೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಭಾರತೀಯ ಉಡುಪನ್ನು ಧರಿಸಿ ಬಂದಿದ್ದ ಲಾರೆನ್ ವಿಶ್ವನಾಥ ದೇವಾಲಯದಲ್ಲಿ ಗರ್ಭಗುಡಿಯ ಹೊರಗಿನಿಂದ ಪ್ರಾರ್ಥನೆ ಸಲ್ಲಿಸಿದ್ದರು.

ಲಾರೆನ್ ಪೊವೆಲ್ ಜಾಬ್ಸ್ ಅವರು ಇಲ್ಲಿಗೆ ತನ್ನ ಗುರುಗಳನ್ನು ಭೇಟಿ ಮಾಡಲು ಬಂದಿದ್ದಾರೆ. ನಾವು ಅವರಿಗೆ ಕಮಲ ಎಂದು ಹೆಸರಿಟ್ಟಿದ್ದೇವೆ ಮತ್ತು ಅವರು ನಮಗೆ ಮಗಳಿದ್ದಂತೆ ಎಂದು ನಿರಂಜನಿ ಅಖಾರದ ಕೈಲಾಶಾನಂದ ಗಿರಿ ಮಹಾರಾಜ್ ತಿಳಿಸಿದ್ದರು.

Edited By : Vijay Kumar
PublicNext

PublicNext

13/01/2025 09:26 am

Cinque Terre

101.09 K

Cinque Terre

2