ಸಾಲಿಗ್ರಾಮ : ಆರ್ ಎಸ್ ಎಸ್ ಸ್ಥಾಪನೆಯಾಗಿ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಥ ಸಂಚಲನ ನಡೆಯಿತು. ಸುಮಾರು 320 ಆರ್ ಎಸ್ ಎಸ್ ಕಾರ್ಯಕರ್ತರು ಪಥ ಸಂಕಲನದಲ್ಲಿ ಭಾಗಿಯಾದರು.
ಸಂಘಕ್ಕೆ ನೂರು ವರ್ಷ ಸಂಭ್ರಮ ಮತ್ತು ಮಕರ ಸಂಕ್ರಾಂತಿ ಉತ್ಸವದ ಹಿನ್ನೆಲೆಯಲ್ಲಿ ಈ ಪಥ ಸಂಚಲನ ಆಯೋಜನೆಗೊಂಡಿದ್ದು ಚೇಂಪಿ ವೆಂಕಟರಮಣ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಪಥಸಂಚಲನ ಸಾಗಿಬಂತು.
ಸಾಲಿಗ್ರಾಮ ಶಿವರಾಮ ಕಾರಂತ ಬೀದಿ ಮೂಲಕ ಸಾಗಿ ಮರಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಶ್ರೀ ಗುರು ನರಸಿಂಹ ದೇವಳದ ಮೈದಾನದಲ್ಲಿ ಪಥ ಸಂಚಲನ ಸಮಾಪ್ತಿಗೊಂಡಿತು. ಈ ವೇಳೆ ಹಿರಿಯ ಕಿರಿಯ ಗಣವೇಷಧಾರಿಗಳನ್ನು ಪುಷ್ಪವೃಷ್ಠಿಯ ಮೂಲಕ ಸ್ಥಳೀಯರು ಸ್ವಾಗತಿಸಿದರು.
ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಸಹಿತ ಗಣ್ಯರು ಭಾಗಿಯಾದರು.
PublicNext
13/01/2025 08:48 am