ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿ ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಎರಡು ಆಟೋಗಳಿಗೆ ಡಿಕ್ಕಿ ಹೊಡೆದಿದ್ದು ಆಟೋ ಚಾಲಕ ಸಹಿತ ಐವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಮುಲ್ಕಿ ಬಸ್ ನಿಲ್ದಾಣದ ಬಳಿ ಬರುತ್ತಿದ್ದಂತೆ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಹಳೆಯಂಗಡಿಯಿಂದ ಮುಲ್ಕಿ ಬರುತ್ತಿದ್ದ ಆಟೋ ಗೆ ಡಿಕ್ಕಿ ಹೊಡೆದಿದೆ. ಮತ್ತೆ ನಿಯಂತ್ರಣ ತಪ್ಪಿ, ಬಳಿಕ ಹೆದ್ದಾರಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡ್ ಹಾಗೂ ಬಸ್ ನಿಲ್ದಾಣದ ಬಳಿ ಬಾಡಿಗೆಗೆ ನಿಂತಿದ್ದ ಆಟೋ ಗೆ ಡಿಕ್ಕಿ ಹೊಡೆದಿದ್ದಾನೆ.
ಈ ಸಂದರ್ಭ ಆಟೋ ಚಾಲಕ ಹಳೆಯಂಗಡಿ ಸಾಗ್ ಬಳಿಯ ನಿವಾಸಿ ಅಬ್ದುಲ್ ಬಶೀರ್, (59), ಪ್ರಯಾಣಿಕರಾದ ಮುಲ್ಕಿ ವನಭೋಜನ ಬಳಿಯ ನಿವಾಸಿಗಳಾದ ಕಮಲ (62) ಶ್ರೀನಿಧಿ (27) ಮತ್ತು ಮಗು ಹಾಗೂ ಇನ್ನೊಂದು ಆಟೋ ಚಾಲಕ ಮಾನಂಪಾಡಿ ನಿವಾಸಿ ಕೃಷ್ಣಪ್ಪ ಸನಿಲ್(72) ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ.
ಅಪಘಾತದಿಂದ ಎರಡು ಆಟೋಗಳಿಗೆ ಹಾನಿಯಾಗಿದ್ದು ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯ ಆಟೋ ಚಾಲಕ ಪುಷ್ಪರಾಜ್ ಮತ್ತಿತರರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
PublicNext
13/01/2025 07:12 pm