ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಬೆಳಂಬೆಳಿಗ್ಗೆ ಆಸ್ಪತ್ರೆ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ಎಸಿ ಸಂಪಗಾವಿ ದಿಢೀರ್ ಭೇಟಿ

ಚಿಕ್ಕೋಡಿ: ಬೆಳಂಬೆಳಿಗ್ಗೆ ದಿಢೀರನೆ ಚಿಕ್ಕೋಡಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸರಕಾರಿ ಬಾಲಕಿಯರ ವಸತಿ ನಿಲಯಕ್ಕೆ, ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳಾದ, ಸುಭಾಷ ಸಂಪಗಾವಿ ಇವರು, ಭೆಟ್ಟಿ ನೀಡಿ ರೋಗಿಗಳ ಹಾಗೂ ಬಾಲಕಿಯರ ಕ್ಷೇಮದ ಬಗ್ಗೆ ಹಾಗೂ ಸೌಲಭ್ಯಗಳ ಬಗ್ಗೆ ವಿಚಾರಣೆ ನಡೆಸಿದರು.

ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಯಾವುದೇ ತರಹದ ಮೂಲಭೂತ ಸೌಕರ್ಯಗಳ ಕೊರತೆಯಾಗಬಾರದು ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ನಮ್ಮ ಕಡೆಗೆ ದೂರುಗಳು ಬಾರದಂತೆ ಎಚ್ಚರವಹಿಸಬೇಕು.ತಮಗೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಲು ತೊಂದರೆಗಳು ಎದುರಾದರೆ ನಮಗೆ ನೇರವಾಗಿ ತಿಳಿಸಿದರು.

ನಾವು ಅವುಗಳನ್ನು ಪರಿಹಾರ ಮಾಡಲು ಬದ್ಧರಿದ್ದೇವೆ, ಎಲ್ಲರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳಿ ಎಂದು ಸೂಚಿಸಿದರು. ಅಲ್ಲಿಯ ನೀರು-ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿ, ಯಾವಾಗಲೂ ಸ್ವಚ್ಛತೆಯನ್ನು ಕಾಪಾಡಬೇಕೆಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

11/01/2025 09:28 am

Cinque Terre

14.36 K

Cinque Terre

0

ಸಂಬಂಧಿತ ಸುದ್ದಿ