", "articleSection": "Greetings", "image": { "@type": "ImageObject", "url": "https://prod.cdn.publicnext.com/s3fs-public/229640-1736526164-sadak.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಅಂದರೇ ನಿಜಕ್ಕೂ ಸಮಾಜ ಸೇವೆಯ ಬಹುದೊಡ್ಡ ಶಕ್ತಿ. ಸ್ವರ್ಣ ಗ್ರೂಪ್ ಕಂಪನಿಯ ಜೊತೆಗೆ ಸಮಾಜ ಸೇವೆಯ ಬ...Read more" } ", "keywords": "Hubballi, Dr. VSV Prasad, Social Worker, Birthday Celebrations, Community Service, Healthcare Professional, Inspirational Leader, Hubballi News, Karnataka Personality, Philanthropy, Social Impact, Birthday Wishes, Community Development.,Hubballi-Dharwad,Greetings", "url": "https://publicnext.com/node" }
ಹುಬ್ಬಳ್ಳಿ: ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಅಂದರೇ ನಿಜಕ್ಕೂ ಸಮಾಜ ಸೇವೆಯ ಬಹುದೊಡ್ಡ ಶಕ್ತಿ. ಸ್ವರ್ಣ ಗ್ರೂಪ್ ಕಂಪನಿಯ ಜೊತೆಗೆ ಸಮಾಜ ಸೇವೆಯ ಬಹುದೊಡ್ಡ ಸಾಮ್ರಾಜ್ಯ ಬೆಳೆಸಿದ ಸಾಧಕರು ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್. ಸಾಧಕರ ಹುಟ್ಟು ಹಬ್ಬವನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅರ್ಥಪೂರ್ಣ ಆಚರಣೆ ಮಾಡುವ ಮೂಲಕ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಗಿದೆ.
ಹುಬ್ಬಳ್ಳಿಯ ಸ್ವರ್ಣ ಪ್ಯಾರಡೈಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕುಟುಂಬ ಸಮೇತವಾಗಿ ಕೇಕ್ ಕತ್ತರಿಸುವ ಮೂಲಕ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಅಗಣಿತ ಪ್ರಮಾಣದ ಶುಭಾಶಯಗಳು, ಕೊರಳಲ್ಲಿ ರಾಜ ಗಾಂಭೀರ್ಯದಿಂದ ರಾರಾಜಿಸಿದ ಹೂವಿನ ಹಾರಗಳಿಂದ ಹುಟ್ಟುಹಬ್ಬದ ಸಂಭ್ರಮಕ್ಕೊಂದು ಮೆರುಗು ಬಂದಿದೆ. ಹೌದು... ರೈಲ್ವೆ ಗುತ್ತಿಗೆಯ ಕೆಲಸದ ಮೂಲಕ ನೂರಾರು ಜನರಿಗೆ ಉದ್ಯೋಗ, ಲಕ್ಷಾಂತರ ಸಹೃದಯಿ ಜನರ ಸೇವೆ ಮಾಡುವ ಮೂಲಕ ಜನಮಾನಸದಲ್ಲಿ ಮನೆ ಮಾಡಿರುವ ವಿ.ಎಸ್.ವಿ ಪ್ರಸಾದ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಅಭಿಮಾನಿಗಳು, ಕನ್ನಡಪರ ಸಂಘಟನೆಯ ಹೋರಾಟಗಾರರು, ಆಟೋ ಚಾಲಕರು, ಮಾಲೀಕರು, ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಸೇರಿದಂತೆ ಬಹುದೊಡ್ಡ ಬಳಗವೇ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಸಮಾಜ ಸೇವಕರು, ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರ ಹುಟ್ಟುಹಬ್ಬದ ಸಂಭ್ರಮ ನಿಜಕ್ಕೂ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ.
Kshetra Samachara
10/01/2025 09:53 pm